ಬೆಂಗಳೂರು,ಮಾ.26- ಜಾಗತಿಕ ತಾಪಮಾನ ಕುರಿತ ಹೋರಾಟದ ನಾಯಕತ್ವವನ್ನು ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಫ್ರೀದಾ ಪಿಂಟೋ ವಹಿಸಿದ್ದು, ವೈಲ್ಡ್ ಈಡೆನ್ಸ್ ಸೌಥ್ ಏಷ್ಯಾ ಪ್ರಾಜೆಕ್ಟ್ನ ರಾಯಭಾರಿಯಾಗಿ ಹೊರಹೊಮ್ಮಿದ್ದಾರೆ.
ಪರಿಸರ ಬದಲಾವಣೆಯ ಸಮಸ್ಯೆಗಳ ಕುರಿತು ಗಮನಸೆಳೆಯುವ ಸಾಕ್ಷ್ಯ ಚಿತ್ರಗಳ ಮೂರನೇ ಸರಣಿಯಲ್ಲಿ ಸುರಕ್ಷಿತ ಮತ್ತು ಸ್ವಚ್ಛ ಶಕ್ತಿಯ ಉತ್ಪಾದಕತೆ ಬಗ್ಗೆ ಚಿತ್ರೀಕರಿಸಲಾಗಿದೆ.
ರೋಸ್ಟಂ ಸ್ಟೇಟ್ ಅಟಾಮಿಕ್ ಎನರ್ಜಿ ಕಾರ್ಪೋರೇಶನ್ ಈ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಿದ್ದು, ಭಾರತ ಮತ್ತು ಬಾಂಗ್ಲಾದೇಶದ ನೈಸರ್ಗಿಕ ಸಂಪತ್ತಿಗೆ ಆದ್ಯತೆ ನೀಡಲಾಗಿದೆ.
ಈ ನಿಟ್ಟಿನಲ್ಲಿ ಪಶ್ಚಿಮ ಘಟ್ಟಗಳು, ಸುಂದರ್ಬನ್, ತಮಿಳುನಾಡಿನ ಅತ್ಯಂತ ದುರ್ಗಮ ಪ್ರದೇಶಗಳಲ್ಲೂ ಚಿತ್ರೀಕರಿಸಲಾಗಿದೆ.
ಮಾನವ ವನ್ಯಜೀವಿ ವೈವಿಧ್ಯತೆ ಕುರಿತು ಸಾಕಷ್ಟು ಕಲಿತಿದ್ದೇನೆ. ಆಳವಾದ ಸಂಶೋಧನೆಯಲ್ಲಿ ತೊಡಗಿದ್ದು, ಇಂಗಾಲದ ಹೊರಹೊಮ್ಮುವಿಕೆ, ಸ್ವಚ್ಛ ಮತ್ತು ಹಸಿರು ಶಕ್ತಿಯ ಪರಿಹಾರವನ್ನು ನೀಡಲು ಸಾಧ್ಯವಾಗಲಿದೆ ಎಂದು ಫ್ರೀದಾ ಪಿಂಟೋ ಅಭಿಪ್ರಾಯಪಟ್ಟಿದ್ದಾರೆ.