ಬಿಜೆಪಿ ಸೇರಿದ ಜಯಪ್ರದಾ, ರಾಂಪುರದಿಂದ ಸ್ಪರ್ಧೆ ಸಾಧ್ಯತೆ

ನವದೆಹಲಿ: ಮಾಜಿ ಸಂಸದೆ ಹಾಗೂ ಹಿರಿಯ ನಟಿ ಜಯಪ್ರದಾ ಮಂಗಳವಾರದಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಜಯಪ್ರದಾ 2004 ಹಾಗೂ 2009 ರಲ್ಲಿ  ರಾಂಪುರ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಆಯ್ಕೆಯಾಗಿದ್ದರು.ಬಿಜೆಪಿಗೆ ಸೇರಿದ ನಂತರ ಪ್ರತಿಕ್ರಿಯಿಸಿದ ಜಯಪ್ರದಾ ” ನಾನು ಟಿಡಿಪಿಯೊಂದಿಗೆ ಹಾಗೂ ಸಮಾಜವಾದಿ ಪಕ್ಷದೊಂದಿಗೆ ಕಾರ್ಯನಿರ್ವಹಿಸಿದ್ದೇನೆ.ಈಗ ನನಗೆ ನರೇಂದ್ರ ಮೋದಿಯವರ ನಾಯಕತ್ವದಡಿಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ದೊರೆತಿದೆ.ಆದ್ದರಿಂದ ಈಗ ನಾನು ಈ ಪಕ್ಷ ಹಾಗೂ ದೇಶಕ್ಕೆ ನನ್ನನ್ನು ಸಮರ್ಪಿಸಿಕೊಂಡಿದ್ದೇನೆ” ಎಂದರು.

“ಅದು ಸಿನಿಮಾ ಆಗಿರಬಹುದು ಅಥವಾ ರಾಜಕೀಯವಾಗಿರಬಹುದು, ನಾನು ಉತ್ತಮವಾದುದ್ದನ್ನೇ ನೀಡಿದ್ದೇನೆ.ಪಕ್ಷವು ನನ್ನನ್ನು ಸ್ವಾಗತಿಸಿರುವುದಕ್ಕೆ ನಾನು ಕೃತಜ್ಞಳಾಗಿದ್ದೇನೆ” ಎಂದರು. ಈಗ ಜಯಾಪ್ರದಾ ಅವರು ರಾಂಪುರ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಜಂಖಾನ್ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

2014 ರ ಚುನಾವಣೆಯಲ್ಲಿ ಆರ್ಎಲ್ಡಿ ಟಿಕೆಟ್ ಮೂಲಕ ಸ್ಪರ್ಧಿಸಿದ್ದ ಅವರು ಬಿಜೆಪಿ ನೇಪಾಲ್ ಸಿಂಗ್ ವಿರುದ್ಧ ಸೋಲನ್ನು ಅನುಭವಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ