ಬೆಂಗಳೂರು, ಮಾ.26- ಮೊದಲ ಮತ್ತು ಎರಡನೇ ಹಂತದ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.
ಮಹಾರಾಷ್ಟ್ರ ಲೋಕಸಭೆ ಚುನಾವಣೆಗೆ ನಡೆಯುವ ಪ್ರಚಾರ ಕಾರ್ಯಕ್ರಮಗಳಲ್ಲಿ ಸೋನಿಯಗಾಂಧಿ, ಪ್ರಿಯಾಂಕಗಾಂಧಿ, ರಾಹುಲ್ಗಾಂಧಿ, ಮನಮೋಹನ್ಸಿಂಗ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 40 ಮಂದಿ ಪ್ರಚಾರಕರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ. ಈ 40 ಮಂದಿಯ ಪೈಕಿ ಮಹಾರಾಷ್ಟ್ರ ಸ್ಥಳೀಯ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮುಕುಲ್ವಾಸ್ನಿಕ್, ಪೃಥ್ವಿರಾಜ್ ಚೌವ್ಹಾಣ್, ಸುಶೀಲ್ಕುಮಾರ್ ಸಿಂಧೆ, ಅಶೋಕ್ ಚೌವ್ಹಾಣ್, ಗುಲಾಂನಬಿ ಆಜಾದ್, ಜ್ಯೋತಿರಾದಿತ್ಯ, ರಾಜೀವ್ಸತಾವ್ ಸೇರಿದಂತೆ ಪ್ರಮುಖ ನಾಯಕರು ಮಹಾರಾಷ್ಟ್ರ ಚುನಾವಣೆಯ ತಾರಾ ಪ್ರಚಾರಕರ ಪಟ್ಟಿಯಲ್ಲಿ ದ್ದಾರೆ.