
ಮೈಸೂರು, ಮಾ.25- ಮೈಸೂರು-ಕೊಡಗು ಹಾಲಿ ಸಂಸದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪ್ರತಾಪ್ ಸಿಂಹ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಕೆಎಸ್ಒಯುನ ವ್ಯವಸ್ಥಾಪನಾ ಮಂಡಳಿ ಮಾಜಿ ಸದಸ್ಯ ಕೆ.ಎಸ್.ಶಿವರಾಮ್ ನೀಡಿದ ದೂರನ್ನು ಚುನಾವಣಾಧಿಕಾರಿಗಳಾಗಿರುವ ಅಭಿರಾಮ್ ಜಿ.ಶಂಕರ್ ಅವರು ಪರಿಶೀಲಿಸಿದ್ದಾರೆ.
ಅವರ ಆದೇಶದಂತೆ ಫ್ಲೈಯಿಂಗ್ ಸ್ಕ್ಯಾರ್ಡ್ ಸಹಾಯಕ ಚುನಾವಣಾಧಿಕಾರಿ ಉಮೇಶ್ ಅವರು ಪ್ರತಾಪ್ ಸಿಂಹ ವಿರುದ್ಧ ನಗರದ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸರ್ಕಾರಿ ಅಂಚೆ ಕಚೇರಿ ಮೂಲಕ ಬುಕ್ಲೆಟ್ಗಳನ್ನು ತರಿಸಲಾಗಿದೆ ಆದರೆ ಬುಕ್ಲೆಟ್ಗಳಲ್ಲಿ ಪ್ರಚಾರಕರ ಹಾಗೂ ಮುದ್ರಕರ ವಿವರ ಇಲ್ಲ. ಬುಕ್ಲೆಟ್ಗಳ ಮುದ್ರಣ ಸಂಖ್ಯೆ ಲೆಕ್ಕ ಸಿಗದ ಹಿನ್ನಲೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲಾಗಿದೆ.