ಇಂದು ರಾಯಲ್ಸ್ – ಕಿಂಗ್ಸ್ ಇಲೆವೆನ್ ಪಂಜಾಬ್ ಫೈಟ್: ರಾಜಸ್ಥಾನದಲ್ಲಿ ಯಾರಾಗಲಿದ್ದಾರೆ ಕಿಂಗ್ ?

ಇಂದು ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಡುವೆ ಬಿಗ್ ಪೈಟ್ ನಡೆಯಲಿದೆ.. ಜೈಪುರದ ಸವಾಯ್ ಮಾನ್ಸಿಂಗ್ ಅಂಗಳದಲ್ಲಿ‌ ಉಭಯ ತಂಡಗಳು‌ ಮುಖಾಮುಖಿಯಾಗುತ್ತಿವೆ. ಕಳೆದ ಎಲ್ಲಾ ಸೀಸನ್ಗಳಲ್ಲಿ ನೀಲಿ ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದ ರಾಜಸ್ಥಾನ ರಾಯಲ್ಸ್ ಆಟಗಾರರು ಈ ಬಾರಿ ಗುಲಾಬಿ ಬಣ್ಣದ ಜೆರ್ಸಿ ತೊಟ್ಟು ಫೀಲ್ಡ್ಗೆ ಇಳಿಯಲಿದ್ದಾರೆ.

ಒಂದು ವರ್ಷದ ಬಳಿಕ ಕಣಕ್ಕಿಳಿಯುತ್ತಿದ್ದಾರೆ ಸ್ಮಿತ್
ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಲೈನ್ ಅಪ್ ಬಲಿಷ್ಠವಾಗಿದೆ. ಸ್ಟೀವನ್ ಸ್ಮಿತ್ ತಂಡಕ್ಕೆ ಮರಳಿರುವುದು ಮತ್ತಷ್ಟು ಬಲ ಬಂದಿದೆ.

ಇಂಗ್ಲೆಂಡಿನ ಬಿಗ್‌ ಹಿಟ್ಟರ್‌ ಜಾಸ್‌ ಬಟ್ಲರ್‌ ಏಕಾಂಗಿಯಾಗಿ ಜಯ ತಂದುಕೊಡ ಬಲ್ಲರು. ಜೊತೆಗೆ ಬೆನ್‌ ಸ್ಟೋಕ್ಸ್‌, ಶಾರ್ಟ್‌, ರಹಾನೆ, ಸ್ಯಾಮ್ಸನ್‌ ತಂಡದ ಆಧಾರ ಸ್ಥಂಭಗಳಾಗಿದ್ದಾರೆ. ಕನ್ನಡಿಗ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. ಬಾಲ್ ಟ್ಯಾಂಪರಿಂಗ್ ನಿಂದಾಗಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ಸ್ಟೀವ್ ಸ್ಮಿತ್ ಮತ್ತೆ ಕಮ್ಬ್ಯಾಕ್ ಮಾಡಿದ್ದು ತಂಡಕ್ಕೆ ಆನೆ ಬಲ ಬಂದಂತಾಗಿದೆ.

ರಾಜಸ್ಥಾನ ತಂಡದ ಬೌಲಿಂಗ್ ವಿಭಾಗವೂ ಸದೃಢವಾಗಿದ್ದು ಜೋಫ್ರಾ ಆರ್ಚರ್ ತಂಡದ ಟ್ರಂಪ್ ಕಾರ್ಡ್, ಐಶ್ ಸೋಧಿ, ಜೈದೇವ್ ಉನಾದ್ಕಟ್, ಧವಳ್ ಕುಲಕರ್ಣಿ ಎದುರಾಳಿ ಬ್ಯಾಟ್ಸ್ಮನ್ಗಳ ರನ್ ದಾಹಕ್ಕೆ ಕಡಿವಾಣ ಹಾಕುವ ಬೌಲರ್ಗಳಾಗಿದ್ದಾರೆ.

ಕಿಂಗ್ಸ್ ಇಲೆವೆನ್ಗೆ ಕೆರಿಬಿಯನ್ ಕಿಂಗ್ಸ್ ಬಲ..!
ಕಳೆದ 11 ಆವೃತ್ತಿಗಳಲ್ಲಿ ಪ್ರಶಸ್ತಿ ಜಯಿಸುವಲ್ಲಿ ವಿಫಲವಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಬಲಿಷ್ಠ ತಂಡವನ್ನು ಕಟ್ಟಿದೆ. ಪಂಜಾಬ್ ತಂಡದಲ್ಲಿ ಬಹುತೇಕ ಆಟಗಾರರು ಮ್ಯಾಚ್ ವಿನ್ನರ್ಗಳೇ ಆಗಿದ್ದು ಈ ಬಾರಿ ಕಪ್ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದೆ. ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್- ಕೆ.ಎಲ್.ರಾಹುಲ್ ಓಪನರ್ಗಳಾಗಿ ಬ್ಯಾಟ್ ಬೀಸಲಿದ್ದು, ಈ ಜೋಡಿ ಸಿಡಿದೆದ್ದರೆ ಎದುರಾಳಿಗಳು ಉಡೀಸ್ ಆಗೋದು ಪಕ್ಕಾ. ಇನ್ನೂ ಪಂಜಾಬ್ ತಂಡದ ಟ್ರಂಪ್ ಕಾರ್ಡ್ ಕ್ರಿಸ್ ಗೇಲ್ ಉತ್ತಮ ಫಾರ್ಮ್ನಲ್ಲಿರುವುದು ತಂಡಕ್ಕೆ ಫ್ಲಸ್ ಪಾಯಿಂಟ್. ಮಧ್ಯಮ ಕ್ರಮಾಂಕದಲ್ಲಿ ಕರುಣ್ ನಾಯರ್, ಮಯಾಂಕ್ ಅಗರ್ವಾಲ್, ಡೇವಿಡ್ ಮಿಲ್ಲರ್, ನಿಕೋಲಸ್ ಪೂರನ್ ಪಂಜಾಬ್ ತಂಡದ ಗೇಮ್ ಚೇಂಜರ್ಗಳಾಗಿದ್ದಾರೆ. ಆದ್ರೆ, ಡೇವಿಡ್ ಮಿಲ್ಲರ್, ನಿಕೋಲಸ್ ಪೂರನ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಸಿಗುವ ಸಾಧ್ಯತೆ ಇದೆ.

ಇನ್ನು ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಕ್ಯಾಪ್ಟನ್ ಆರ್.ಅಶ್ವಿನ್ ಬಲಿಷ್ಠವಾಗಿದೆ . ಕಳೆದ ವರ್ಷದ ಪರ್ಪಲ್ ಕ್ಯಾಪ್ ಹಿರೋ ಆಂಡ್ರೋ ಟೈ, ಯುವ ಇಂಗ್ಲೆಂಡ್ ವೇಗಿ ಸ್ಯಾಮ್ ಕರನ್ ಎದುರಾಳಿಗಳಿಗೆ ಸವಾಲೊಡ್ಡಬಲ್ಲ ಬೌಲರ್ಗಳಾಗಿದ್ದಾರೆ. ಟೀಮ್ ಇಂಡಿಯಾದ ಕೇರಂ ಸ್ಪೆಷಲಿಸ್ಟ್ ಖ್ಯಾತಿಯ ರವಿಚಂದ್ರನ್ ಅಶ್ವಿನ್ ಮ್ಯಾಜಿಕ್ ಸ್ಪೆಲ್ ಮಾಡಲು ಉತ್ಸುಕರಾಗಿದ್ರೆ, ಯುವ ಕ್ರಿಕೆಟಿಗ ವರುಣ್ ಚಕ್ರವರ್ತಿ, ಮುಜೀಬ್ ರಹಮನ್ ಎದುರಾಳಿ ಬ್ಯಾಟ್ಸಮನ್ಸ್ಗಳನ್ನ ಕಂಗೆಡಿಸಲು ರೆಡಿಯಾಗಿದ್ದಾರೆ.

ಇನ್ನೂ ತಂಡಕ್ಕೆ ಮೊಹಮ್ಮದ್ ಶಮಿ ಬಂದಿರೋದ್ರಿಂದ ಪಂಜಾಬ್ ಬೌಲಿಂಗ್ ವಿಭಾಗ ಮತ್ತಷ್ಟು ಗಟ್ಟಿಯಾಗಿದೆ.

ಒಟ್ನಲ್ಲಿ ಇಂದಿನ ರಾಜಸ್ಥಾನ್ ರಾಯಲ್ಸ್ – ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಕಾದಾಟದಲ್ಲಿ ಯಾರು ಕಿಂಗ್ ಆಗ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ