ಕಲರ್ಫುಲ್ ಟೂರ್ನಿ ಐಪಿಎಲ್ ಟೂರ್ನಿಯ ಎರಡನೇ ದಿನದಾಟದ ಪಂದ್ಯದಲ್ಲಿ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ನಲ್ಲಿ ಆತಿಥೇಯ ಕೋಲ್ಕತ್ತಾ ತಂಡ ಸನ್ರೈಸರ್ಸ್ ವಿರುದ್ಧ ರೋಚಕ ಗೆಲುವು ಪಡೆದು ಶುಭಾರಂಭ ಮಾಡಿತು. ಹಾಗಾದ್ರೆ ಬನ್ನಿ ಕೋಲ್ಕತ್ತಾ ಮತ್ತು ಸನ್ರೈಸರ್ಸ್ ನಡುವಿನ ಕದನ ಹೇಗಿತ್ತು ಅನ್ನೋದನ್ನ ನೋಡೋಣ ಬನ್ನಿ.
ಸಾಲಿಡ್ ಓಪನಿಂಗ್ ಕೊಟ್ಟ ವಾರ್ನರ್, ಬೇರ್ಸ್ಟೊ
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಸನ್ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ತಂಡದ ಓಪನರ್ಸ್ಗಳಾಸ ಡೇವಿಡ್ ವಾರ್ನರ್ ಮತ್ತು ಜಾನಿ ಬೇರ್ಸ್ಟೊ ಆeಛಿeಟಿಣ ಓಪನಿಂಗ್ ಕೊಟ್ರು. ಆರಂಭದಲ್ಲೆ ಕಾಡಿದ ಈ ಜೋಡಿ ಕೋಲ್ಕತ್ತಾ ಬೌಲರ್ಸ್ಗಳ ಬೆವರಿಳಿಸಿದ್ರು. ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದ ಈ ಜೋಡಿ ಮೊದಲ ವಿಕೆಟ್ ಗೆ 118 ರನ್ ಸೇರಿಸಿದ್ರು.
ಆದರೆ 39 ರನ್ ಗಳಿಸಿ ಅರ್ಧ ಶತಕದತ್ತ ಮುನ್ನುಗುತ್ತಿದ್ದ ಓಪನರ್ ಜಾನಿ ಬೈರ್ಸ್ಟೊ ಸ್ಪಿನ್ನರ್ ಪಿಯೂಶ್ ಚಾವ್ಲಾ ಅವರ ಗೂಗ್ಲಿ ಎಸೆತದಲ್ಲಿ ಬೌಲ್ಡ್ ಆದ್ರು. ಬೇರ್ಸ್ಟೊ ಒಟ್ಟು 35 ಎಸೆತ ಎದುರಿಸಿ 3 ಬೌಂಡರಿ 1 ಸಿಕ್ಸರ್ ಬಾರಿಸಿ 39 ರನ್ ಗಳಿಸಿದ್ರು.
ಅರ್ಧ ಶತಕ ಬಾರಿಸಿ ಮಿಂಚಿದ ಡೇವಿಡ್ ವಾರ್ನರ್
ನಂತರ ಒಂದನೇ ಕ್ರಮಾಂಕದಲ್ಲಿ ಬಂದ ಆಲ್ರೌಂಡರ್ ವಿಜಯ್ ಶಂಕರ್ ಡೇವಿಡ್ ವಾರ್ನರ್ಗೆ ಉತ್ತಮ ಸಾಥ್ ಕೊಟ್ರು. ಡೇವಿಡ್ ವಾರ್ನರ್ 31 ಎಸೆತದಲ್ಲಿ ಅರ್ಧ ಶತಕ ಬಾರಿಸಿ ಸಂಭ್ರಮಿಸಿದ್ರು. ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ ವಾರ್ನರ್ ಶತಕದತ್ತ ದಾಪುಗಾಲು ಹಾಕಿದ್ರು. ಆದ್ರೆ 85 ರನ್ ಗಳಿಸಿದ್ದಾಗ ರಸೆಲ್ ಎಸೆತದಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪಾಗೆ ಕ್ಯಾಚ್ ನೀಡಿ ಹೊರ ನಡೆದ್ರು.
ಡೇವಿಡ್ ವಾರ್ನರ್ ಒಟ್ಟು 53 ಎಸೆತ ಎದುರಿಸಿ 9 ಬೌಂಡರಿ 3 ಸಿಕ್ಸರ್ ಬಾರಿಸಿ ಒಟ್ಟು 85 ರನ್ ಗಳಿಸಿದ್ರು.
ಸನ್ರೈಸರ್ಸ್ ನಿಗದಿತ 3 ವಿಕೆಟ್ಗೆ 181 ರನ್
ವಾರ್ನರ್ ಔಟ್ ಆಗುತ್ತಿದ್ದಂತೆ ಸನ್ರೈಸರ್ಸ್ ತಂಡದ ರನ್ ವೇಗ ದಿಢೀರ್ ಕುಸಿತ ಕಂಡಿತು. ಕೊನೆಯಲ್ಲಿ ವಿಜಯ್ ಶಂಕರ್ 40, ಯೂಸೆಫ್ ಪಠಾಣ್ 1, ಮನೀಶ್ ಪಾಂಡೆ ಅಜೇಯ 8 ರನ್ ಗಳಿಸಿದ್ರು. ಇದರೊಂದಿಗೆ ಸನ್ರೈಸರ್ಸ್ ತಂಡ ನಿಗದಿತ ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.
ಆರಂಭಿಕ ಆಘಾತ ಅನುಭವಿಸಿದ ಕೋಲ್ಕತಾ ನೈಟ್ ರೈಡರ್ಸ್
182 ಬಿಗ್ ಟಾರ್ಗೆಟ್ ಬೆನ್ನತ್ತಿದ ಕೋಲ್ಕತ್ತಾ ತಂಡಕ್ಕೆ ಓಪನರ್ಸ್ಗಳಾದ ಕ್ರಿಸ್ ಲೀನ್ ಮತ್ತು ನಿತೀಶ್ ರಾಣಾ ಒಳ್ಳೆಯ ಓಪನಿಂಗ್ ಕೊಡುವಲ್ಲಿ ಎಡವಿದ್ರು. 7 ರನ್ ಗಳಿಸಿದ್ದ ಕ್ರಿಸ್ ಲೀನ್ ಶಕೀಬ್ ಅಲ್ ಹಸನ್ಗೆ ಬಲಿಯಾದ್ರು.
ಮೂರನೇ ಕ್ರಮಾಂಕದಲ್ಲಿ ಬಂದ ನಿತೀಶ್ ರಾಣಾಗೆ ಉತ್ತಮ ಸಾಥ್ ಕೊಟ್ರು. ಸನ್ರೈಸರ್ಸ್ ಬೌಲಿಂಗ್ ದಾಳಿಯನ್ನ ಉಡೀಸ್ ಮಾಡಿದ ಈ ಜೋಡಿ ತಂಡವನ್ನ ಆರಂಭಿಕ ಆಘಾತದಿಂದ ಪಾರು ಮಾಡಿತು.
ಆದರೆ 35 ರನ್ಗಳಿಸಿದ್ದ ರಾಬಿನ್ ಉತ್ತಪ್ಪ ಸಿದ್ದಾರ್ಥ್ ಕೌಲ್ ಎಸೆತದಲ್ಲಿ ಬೌಲ್ಡ್ ಆದ್ರು. ಇದಾದ ಕೆಲವೇ ಹೊತ್ತಲ್ಲಿ ಕ್ಯಾಪ್ಟನ್ ದಿನೇಶ್ ಕಾರ್ತಿಕ್ ಕೂಡ 2 ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ಕೋಲ್ಕತ್ತಾ ತಂಡ ಮತ್ತೆ ಸೋಲಿನ ಸುಳೀಯಲ್ಲಿ ಸಿಲುಕಿತು. ಓಪನರ್ ನಿತೀಶ್ ರಾಣಾ ಅರ್ಧ ಶತಕ ಬಾರಿಸಿ ಸಂಭ್ರಮಿಸಿಸುತ್ತಿರುವಾಗಲೇ ರಶೀದ್ ಖಾನ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ರು.
ರೋಚಕ ಗೆಲುವು ತಂದುಕೊಟ್ಟ ರಸೆಲ್, ಶುಭಮನ್ ಗಿಲ್
118 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕೋಲ್ಕತ್ತಾ ತಂಡಕ್ಕೆ ಆಲ್ರೌಂಡರ್ ಆ್ಯಂಡ್ರೋ ರಸೆಲ್ ಮತ್ತು ಶುಭಮನ್ ಗಿಲ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಪಂದ್ಯದ ಗತಿಯನ್ನೆ ಬದಲಿಸಿದ್ರು. ಅದರಲ್ಲೂ ಸನ್ರೈಸರ್ಸ್ ಬೌಲರ್ಸ್ಗಳನ್ನ ಮನಬಂದಂತೆ ಚೆಂಡಾಡಿದ ರಸೆಲ್ 18ನೇ ಓವರ್ನಲ್ಲಿ 2 ಸಿಕ್ಸ್ ರ್ ಮತ್ತು ಒಂದು ಬೌಂಡರಿ ಹಾಗೂ 19ನೇ ಓವರ್ನಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿ ತಂಡವನ್ನ ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದ್ರು.
ಕೊನೆಯ ಓವರ್ನಲ್ಲಿ 13 ರನ್ ಬೇಕಿದ್ದಾಗ ಯಂಗ್ ಡೈನಾಮಿಕ್ ಬ್ಯಾಟ್ಸ್ಮನ್ ಶುಭಮನ್ ಗಿಲ್ ಎರಡು ಸಿಕ್ಸರ್ಗಳನ್ನ ಬಾರಿಸಿ ಇನ್ನು ಎರಡು ಎಸೆತ ಬಾಕಿ ಇರುವಂತೆ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ರು. ಇದರೊಂದಿಗೆ ಕೋಲ್ಕತ್ತಾ ತಂಡ ಮೊದಲ ಪಂದ್ಯದಲ್ಲೆ ಶುಭಾರಂಭ ಮಾಡಿತು.