ಸಾರಿಗೆ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ-ಘಟನೆಯಲ್ಲಿ ಮಹಿಳೆಯ ಸಾವು

ದಾವಣಗೆರೆ, ಮಾ.25- ಸಾರಿಗೆ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿ ಪತಿ ಗಂಭೀರ ಗಾಯಗೊಂಡಿರುವ ಘಟನೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚನ್ನಗಿರಿ ತಾಲೂಕಿನ ಮರಡಿ ಗ್ರಾಮದ ನಾಗರತ್ನಮ್ಮ(48) ಸಾವನ್ನಪ್ಪಿದ ದುರ್ದೈವಿ.

ನಿನ್ನೆ ಮಧ್ಯಾಹ್ನ ಮಗನ ಮದುವೆ ನಿಶ್ಚಿಯ ಮಾಡಲೆಂದು ಸುರೇಶ್ ಮತ್ತು ನಾಗರತ್ನಮ್ಮ ಇಬ್ಬರು ಬೈಕಿನಲ್ಲಿ ದಾವಣಗೆರೆಗೆ ತೆರಳುತ್ತಿದ್ದರು. ಈ ವೇಳೆ ಬಿಸಿಎಂ ಟೌನ್‍ಶಿಫ್ ರ್ವೆಲೈ ಅಂಡರ್ ಬ್ರಿಡ್ಜ್ ಬಳಿ ಹರಿಹರ ಡಿಪೊಗೆ ಸೇರಿದ ಸಾರಿಗೆ ಬಸ್‍ನ ಒವರ್ ಟೆಕ್ ಮಾಡಲು ಹೋಗಿ ಬೈಕ್‍ನ ಹ್ಯಾಂಡಲ್ ಬಸ್‍ಗೆ ತಗುಲಿದೆ. ಈ ವೇಳೆ ಬೈಕ್‍ನ ಹಿಂಬದಿ ಕುಳಿತಿದ್ದ ಪತ್ನಿ ನಾಗರತ್ನಮ್ಮ ಕೆಳಗೆ ಬಿದ್ದಿದ್ದು.ಬಸ್ ಹಿಂಬದಿ ಚಕ್ರ ಆಕೆಯ ಮೇಲೆ ಹರಿದಿದೆ.ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು.

ಪತಿ ಸುರೇಶ್ ಸಣ್ಣಪುಟ್ಟ ಗಾಯಗಳಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಬಸ್ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ