ಬೆಂಗಳೂರು: ಖ್ಯಾತ ಸಾಹಿತಿ ನಿತ್ಯೋತ್ಸವ ಕವಿ ಸಾಹಿತಿ ಡಾ.ನಿಸ್ಸಾರ್ ಅಹಮದ್ ಅವರ ಪತ್ನಿ ಶ್ರೀಮತಿ ಶಾನವಾಜ್ ಬೇಗಮ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಅವರಿಗೆ 77ವರ್ಷ ವಯಸ್ಸಾಗಿತ್ತು.
ತೀವ್ರ ಅನಾರೋಗ್ಯ ದಿಂದ ಬಳಲುತ್ತಿದ್ದ ಅವರು ಕಳೆದ 15ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕವಿ ನಿಸ್ಸಾರ್ ಅಹಮದ್ ಮತ್ತು 4 ಮಕ್ಕಳು ಹಾಗೂ ಅಪಾರ ಬಳಗವನ್ನ ಅಗಲಿದ್ದಾರೆ.
“ನನ್ನ ಎಲ್ಲಾ ಸಾಹಿತ್ಯಾಸಕ್ಕೆ ನನ್ನ ಪತ್ನಿ ಸ್ಪೋರ್ತಿಯಾಗಿದ್ದರು. ನನ್ನ ಸಾಹಿತ್ಯಕ್ಕೆ ಅವರ ಕೊಡುಗೆಯನ್ನ ನಾನು ಯಾವತ್ತು ಮರೆಯಲಾರೆ” ಎಂದು ಕವಿ ಭಾವುಕರಾಗಿ ನುಡಿದಿದ್ದಾರೆ. ಶಾಲೆಯಲ್ಲಿ ಮುಖ್ಯೋಪದ್ಯಾರಾಗಿದ್ದ ಶಾನವಾಜ್ 16 ವರ್ಷದ ಹಿಂದೆ ನಿವೃತ್ತರಾಗಿದ್ದರು.
ಅಂತ್ಯಕ್ರಿಯೆ ನಾಳೆ ಮದ್ಯಾಹ್ನ 2 ಗಂಟೆಗೆ ದೊರದರ್ಶನ ಕೇಂದ್ರದ ಬಳಿಯ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬ ಮೊಲಗಳು ತಿಲಿಸಿವೆ.






