ಮುಂಬೈ ಇಂಡಿಯನ್ಸ್ – ಡೆಲ್ಲಿ ಕ್ಯಾಪಿಟಲ್ಸ್ ನಡುವೆ 2ನೇ ಪಂದ್ಯ ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆಯುತ್ತಿದೆ. ಕಳೆದ ವರ್ಷ ಪ್ಲೇ ಆಫ್ ತಲುಪಲು ವಿಫಲವಾಗಿದ್ದ ತಂಡಗಳು ಈ ಬಾರಿ ಐಪಿಎಲ್ ಕಪ್ ಗೆಲ್ಲಲು ಪಣತೊಟ್ಟಿವೆ. 11 ಆವೃತ್ತಿಗಳಲ್ಲಿ ಕಪ್ ಗೆಲ್ಲುಲು ವಿಫಲವಾಗಿದ್ದ ಡೆಲ್ಲಿ, ಈ ಬಾರಿ ಡೆಲ್ಲಿ ಕ್ಯಾಪಿಟಲ್ ಎಂದು ಮರುನಾಮಕರಣದಿಂದ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದೆ.
ರೋಹಿತ್ ಶರ್ಮಾಗೆ ಶ್ರೇಯಸ್ ಅಯ್ಯರ್ ಚಾಲೆಂಜ್..!
ಸಿಂಗ್ ನತ್ತ ಎಲ್ಲರ ಚಿತ್ತ.!ಐಪಿಎಲ್ನ ಮೋಸ್ಟ್ ಸಕ್ಸಸ್ ಫುಲ್ ಕ್ಯಾಪ್ಟನ್ಗಳಲ್ಲಿ ರೋಹಿತ್ ಶರ್ಮಾ ವಿರುದ್ಧ ಶ್ರೇಯಸ್ ಅಯ್ಯರ್ ತೊಡೆತಟ್ಟಲು ಮುಂದಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಪೋಟಕ ಬ್ಯಾಟ್ಸ್ಮನ್ಗಳ ದಂಡೇ ಇದೆ. ಕ್ವಿಂಟನ್ ಡಿಕಾಕ್, ಯುವರಾಜ್ ಸಿಂಗ್, ರೋಹಿತ್ ಶರ್ಮಾರಂಥ ಅನುಭವಿ ಆಟಗಾರರಿಂದ ಮುಂಬೈ ತಂಡ ಕೂಡಿದೆ. ಜೊತೆಗೆ ಪಾಂಡ್ಯಾ ಬ್ರದರ್ಸ್, ಬೆನ್ ಕಟ್ಟಿಂಗ್, ಎವಿನ್ ಲೆವಿಸ್, ಪೋಲಾರ್ಡ್ ಅಂತಹ ಬಿಗ್ ಹಿಟ್ಟರ್ಗಳು ತಂಡದಲ್ಲಿದ್ದಾರೆ. ಈ ಬಾರಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುತ್ತಿರುವ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮೇಲೆ ಎಲ್ಲರ ಗಮನ ನೆಟ್ಟಿದೆ.
ಇನ್ನೂ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬೂಮ್ರಾಯಾರ್ಕರ್ ಎಸೆತಗಳಿಂದ ಎದುರಾಳಿಗಳನ್ನು ಕಾಡಿದ್ರೆ, ಸ್ಪಿನ್ ಮೂಲಕ ಎದರಾಳಿಗಳನ್ನು ಮಯಾಂಕ್ ಮಾರ್ಕೆಂಡೆ ಮಕಾಡೆ ಮಲಿಗಿಸೋ ತಾಕತ್ತು ಹೊಂದಿದ್ಧಾರೆ.
ಡೆಲ್ಲಿ ಕ್ಯಾಪಿಟಲ್ ತಂಡ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದೆ. ಹೊಸ ಹೆಸರು, ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯುತ್ತಿರು ಶ್ರೇಯಸ್ ಪಡೆ ಪ್ರಶಸ್ತಿ ಗೆದ್ದು ಶಾಕ್ ಕೊಡಲು ಸಜ್ಜಾಗಿದೆ. ಡೆಲ್ಲಿ ತಂಡ ಹೆಚ್ಚು ಯುವ ಆಟಗಾರರಿಂದ ಕೂಡಿದ್ದು ಬ್ಯಾಟಿಂಗ್ ಲೈನ್ ಆಫ್ ಬಲಿಷ್ಠವಾಗಿದೆ.
ಇನ್ನೂ ತವರಿನ ತಂಡಕ್ಕೆ ಶಿಖರ್ ಧವನ್ ಕೂಡಿಕೊಂಡಿದ್ದು ಡೆಲ್ಲಿಗೆ ಮತ್ತಷ್ಟು ಬಲ ಬಂದಿದೆ. ಕಾಲಿನ್ ಮನ್ರೋ, ಕಾಲಿನ್ ಇನ್ಗ್ರಾಮ್ , ಶೆರ್ಫಾನ್ ರುಥರ್‌ಫೋರ್ಡ್ ರಂಥಹ ಹೊಡಿಬಡಿ ಆಟಗಾರರೇ ಡೆಲ್ಲಿ ತಂಡದಲ್ಲಿದ್ದಾರೆ. ಜೊತೆಗೆ ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಯಾವುದೇ ಸಮಯದಲ್ಲಿ ಪಂದ್ಯಕ್ಕೆ ತಿರುವುಕೊಡಬಲ್ಲರು.
ಇನ್ನೂ ಡೆಲ್ಲಿ ತಂಡದ ಪೃಥ್ವಿ ಶಾ ತವರಿನ ಅಂಗಳದಲ್ಲಿ ಆಡುತ್ತಿದ್ದು ಪೃಥ್ವಿ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ.ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಸಹ ಬಲಿಷ್ಠವಾಗಿದ್ದು ಕಗಿಸೋ ರಬಡ, ಟ್ರೆಂಟ್ ಬೌಲ್ಟ್, ಇಶಾಂತ್ ಶರ್ಮಾ ಬೆಂಕಿ ಚೆಂಡು ಎಸೆಯಲು ಸಿದ್ದರಾಗಿದ್ರೆ, ಅಮಿತ್ ಮಿಶ್ರಾ ತಮ್ಮ ಕೈಚಳಕದ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಪಲ್ಟಿ ಹೊಡಿಸಲು ಉತ್ಸುಕರಾಗಿದ್ದಾರೆ.ಒಟ್ನಲ್ಲಿ ಇಂದು ನಡೆಯುವ ಎರಡು ಪಂದ್ಯಗಳು ಅಭಿಮಾನಿಗಳನ್ನ ಸಖತ್ Entertain ಮಾಡಲಿದ್ದು ಅಭಿಮಾನಿಗಳ ಪಾಲಿಗೆ ಡಬಲ್ ಧಮಾಕ ಎಂದರೆ ತಪ್ಪಾಗಲ್ಲ.