ಆರ್ಸಿಬಿಗೆ ಈ ಮೂರು ಆಟಗಾರರೆ ಟ್ರಂಪ್ ಕಾರ್ಡ್ :ಎದುರಾಳಿಗಳ ಪಾಲಿಗೆ ಇವರೇ ರಿಯಲ್ ವಿಲನ್ಸ್

ವಿರಾಟ್ ಕೊಹ್ಲಿ ನೇತೃಥ್ವದ ಆರ್ಸಿಬಿ ತಂಡ ಈ ಬಾರಿ ಈ ಬಾರಿಯ 12 ನೇ ಸೀಸನ್ ನಲ್ಲಿ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯುತ್ತಿದೆ. ಚೆನ್ನೈ ವಿರುದ್ಧ ಆಡುವ ಮೂಲಕ ಈ ಸೀಸ್ನ ಆರಂಭಿಸಲಿರುವ ಕೊಹ್ಲಿಗೆ ಪಡೆಗೆ ತಂಡದ ಮೂರು ಆಟಗಾರು ಆಡಿದ್ರೆ ಎಂಥ ಎದುರಾಳಿಗಳೇ ಆಗಿದ್ರು ಗೆಲುವು ಸುಲಭವಾಗಿ ಧಕ್ಕಲಿದೆ. ಹಾಗಾದ್ರೆ ಆ ಮೂರು ಆಟಗಾರರು ಯಾರು ಅನ್ನೋದನ್ನ ತೋರಿಸ್ತೀವಿ ನೋಡಿ…

ಬಲಿಷ್ಠ ಸಿಎಸ್ಕೆ ತಂಡದ ವಿರುದ್ಧ ಆರ್ಸಿಬಿ ಟೀಂ ಗೆಲುವು ಸಾಧಿಸಬೇಕಾದ್ರೆ ಈ ಮೂವರು ಆಟಗಾರರು ಉತ್ತಮ ಪ್ರದರ್ಶನ ನೀಡಬೇಕಿದೆ.

ನಂ.1
ಕ್ಯಾಪ್ಟನ್ ವಿರಾಟ್ ಕೊಹ್ಲಿ
ರ್ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಕಳೆದ ಒಂದು ವರ್ಷದಿಂದ ಕ್ರಿಕೆಟ್ನ ಮೂರು ಫಾರ್ಮೆಟ್ನಲ್ಲೂ ರನ್ ಹೊಳೆಯನ್ನೆ ಹರಿಸಿರುವ ಕ್ಯಾಪ್ಟನ್ ಕೊಹ್ಲಿ ಈ ಬಾರಿ ಆರ್ಸಿಬಿ ಪರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಲು ಪ್ಲಾನ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಇತ್ತಿಚೆಗೆ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಶತಕಗಳನ್ನ ಬಾರಿಸಿ ಅಬ್ಬರಿಸಿದ್ರು.

ಹೀಗಾಗಿ ವಿರಾಟ್ ಕೊಹ್ಲಿ ಮೇಲೆ ಈ ಬಾರಿ ಭಾರೀ ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿದೆ. ಕೊಹ್ಲಿಗೆ ಕಠಿಣ ಸಂದರ್ಭದಲ್ಲೂ ಏಕಾಂಗಿಯಾಗಿ ಗೆಲ್ಲಿಸುವ ಸಾಮರ್ಥ್ಯ ಕೊಹ್ಲಿಗಿದೆ. ವಿರಾಟ್ ಸಿಡಿದೆದ್ರೇ ಗೆಲುವು ಕಟ್ಟಿಟ್ಟ ಬುತ್ತಿ. ಕೊಹ್ಲಿ ಸಾಮರ್ಥ್ಯ ಏನು ಎಂದು ತಿಳಿದಿರುವ ಸಿಎಸ್ಕೆ ತಂಡದ ನಾಯಕ ಧೋನಿ, ಅತಿ ಬೇಗ ವಿರಾಟ್ನನ್ನ ಕಟ್ಟಿಹಾಕಲು ರಣತಂತ್ರ ಹೆಣೆಯುವ ಸಾಧ್ಯತೆ ಇದೆ. ಒಂದು ವೇಳೆ ವಿರಾಟ್ ವಿಕೆಟ್ ಪಡೆಯುವಲ್ಲಿ ಸಿಎಸ್ಕೆ ವಿಫಲವಾದ್ರೆ ಆರ್ಸಿಬಿ ತಂಡಕ್ಕೆ ಗೆಲುವು ಫಿಕ್ಸ್.

ಐಪಿಎಲ್ನಲ್ಲಿ ಕೊಹ್ಲಿ ಸಾಧನೆ
ಪಂದ್ಯ 163
ರನ್ 4,948
ಶತಕ/ಅರ್ಧ ಶತಕ 4 / 34
ಹೈಯೆಸ್ಟ್ ಸ್ಕೋರ್ 113
ಕ್ಯಾಪ್ಟನ್ ಕೊಹ್ಲಿ ಆರ್ಸಿಬಿ ಪರ ಇದುವರೆಗೂ 163 ಪಂದ್ಯಗಳನ್ನಾಡಿದ್ದು 4, 948 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ 34 ಅರ್ಧಶತಕ ಒಳಗೊಂಡಿದೆ. 113 ರನ್ ಕೊಹ್ಲಿ ಬಾರಿಸಿದ ಹೈಯೆಸ್ಟ್ ಸ್ಕೋರ್ ಆಗಿದೆ.

ಕಳೆದ ಸೀಸನ್ಲ್ಲೂ ರನ್ ಹೊಳೆಯನ್ನ ಹರಿಸಿ ವೀರಾವೇಶದ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ 14 ಪಂದ್ಯಗಳಿಂದ 530 ರನ್ ಗಳಿಸಿ ಹಲವಾರು ದಾಖಲೆಗಳನ್ನ ಬರೆದಿದ್ರು.

ನಂ.2 ಶಿಮ್ರೋನ್ ಹೆಟ್ಮೇರ್
ಹೆಟ್ಮೇಯರ್ ಕಳೆದ ಕೆಲ ವರ್ಷಗಳಲ್ಲಿ ಅತ್ಯಂತ ಭರವಸೆಯ ಆಟಗಾರ ಎಂದು ಗುರ್ತಿಸಿಕೊಂಡಿದ್ದಾರೆ. ಹಾಗಾಗಿಯೇ 2018ರಲ್ಲಿ ಐಸಿಸಿ ಪ್ರಕಟಿಸಿದ್ದ, ಪಂದ್ಯದ ಗತಿ ಬಲಿಸುವ ಸಾಮರ್ಥ್ಯವಿರುವ ಟಾಪ್ ಐವರ ಸ್ಥಾನದಲ್ಲಿ ಹೆಟ್ಮೇಯರ್ ಕೂಡ ಸ್ಥಾನ ಪಡೆದಿದ್ರು. ಆದ್ದರಿಂದ ಹಾರಾಜಿನಲ್ಲಿ ಇವ್ರನ್ನ ಕೊಂಡುಕೊಳ್ಳಲು ದೆಹಲಿ, ಪಂಜಾಬ್, ಹೈದರಾಬಾದ್ ಮತ್ತು ಆರ್ಸಿಬಿ ತಂಡ ಭಾರಿ ಪೈಪೋಟಿ ನಡೆಸಿದ್ದವು, ಅಂತಿಮವಾಗಿ 4.2 ಕೋಟಿ ರೂಪಾಯಿಗೆ ಆರ್ಸಿಬಿ ತಂಡ ಸೇರಿಕೊಂಡ್ರು. ಏಕದಿನ ಪಂದ್ಯಗಳಲ್ಲಿ 110 ಸ್ಟ್ರೈಕ್ರೇಟ್ ಹೊಂದಿರುವ ಹೆಟ್ಮೇರ್ ಮಧ್ಯಮ ಕ್ರಮಾಂಕದಲ್ಲಿ ತಂಡವನ್ನ ಸಮರ್ಥವಾಗಿ ಮುನ್ನಡೆಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಒಂದು ವೇಳೆ ಚೆನ್ನೈ ತಂಡದ ವಿರುದ್ಧ ಹೆಟ್ಮೇರ್ ಸಿಡಿದೆದ್ರೇ ಆರ್ಸಿಬಿ ಗೆಲುವು ಕಷ್ಟವೇನಲ್ಲ.

ನಂ.3 :ಯುಜುವೇಂದ್ರ ಚಹಲ್
ಆರ್ಸಿಬಿ ತಂಡದ ಗೂಗ್ಲಿ ಬೌಲರ್ ಯಜುವೇಂದ್ರ ಚಹಲ್ ಈ ಬಾರಿಯ ಸೀಸನ್ನಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಸದ್ಯ ಟೀಂ ಇಂಡಿಯಾದಲ್ಲಿ ಸ್ಪಿನ್ನರ್ಗಳಲ್ಲಿ ಕುಲ್ದೀಪ್ ಯಾದವ್ ಹೊರತು ಪಡಿಸಿದ್ರೆ ಚಹಲ್ ಒಬ್ಬರೆಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರ. 28 ವರ್ಷದ ಈ ಯುವ ಬೌಲರ್ ದಾಳಿಗೆ ಟಾಪ್ ಬ್ಯಾಟ್ಸ್ಮೆನ್ಗಳು ಕೂಡ ರನ್ಗಳಿಸಲು ಪರದಾಡುತ್ತಾರೆ.

ಕಳೆದ ಬಾರಿ ಚಹಲ್ ಸಾಧನೆ
ಪಂದ್ಯ 14
ವಿಕೆಟ್ 12
ಕಳೆದ ಬಾರಿ ಯಜುವೇಂದ್ರ ಚಹಲ್ 14 ಪಂದ್ಯಗಳನ್ನ ಆಡಿದ್ರು. 14 ಪಂದ್ಯಗಳಿಂದ 12 ವಿಕೆಟ್ ಪಡೆದು ಶೈನ್ ಆಗಿದ್ರು.

ಸ್ಪಿನ್ ಸ್ನೇಹಿಯಾಗಿರುವ ಚಿಪಾಕ್ ಅಂಗಳದಲ್ಲಿ ಚಹಲ್ ಜಾದೂ ಮಾಡಿದ್ರೇ ಆರ್ಸಿಬಿ ಗೆಲುವು ಪಕ್ಕಾ.

ಒಟ್ನಲ್ಲಿ ಈ ಮೂವರ ಆಟಗಾರರು ಸಿಎಸ್ಕೆ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ರೇ ಖಂಡಿತವಾಗಿಯೂ ಆರ್ಸಿಬಿ ತಂಡ 12ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ