
ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಎಲ್ಲ ಪಕ್ಷಗಳ ಅಭ್ಯರ್ಥಿ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿದ್ದು, ಇನೇನು ಅಧಿಕೃತವಾಗಿ ಬಿಡುಗಡೆಗೊಳಿಸಲಿವೆ. ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್ ಕೂಡ ಅಭ್ಯರ್ಥಿ ಪಟ್ಟಿ ಸಿದ್ಧ ಮಾಡಿದೆ. ಕೆಲ ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ತುಮಕೂರು ಕ್ಷೇತ್ರವನ್ನು ಖಾಲಿ ಬಿಡಲಾಗಿದ್ದು, ದೇವೇಗೌಡರ ನಿರ್ಧಾರದ ಮೇಲೆ ಈ ಕ್ಷೇತ್ರದಿಂದ ಅಭ್ಯರ್ಥಿ ಹಾಕಲಾಗುತ್ತದೆ. ಸಂಭಾವ್ಯರ ಪಟ್ಟಿಯಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಬಿ.ಕೆ ಹರಿಪ್ರಸಾದ್, ರೋಷನ್ ಬೇಗ್ ಗೆ ಭಾರೀ ಮುಖಭಂಗವಾಗಿದೆ.
ಕೋಲಾರದಲ್ಲಿ ಮುನಿಯಪ್ಪಗೆ ಟಿಕೆಟ್ ನೀಡದಂತೆ ಶಾಸಕರಾದ ರಮೇಶ್ ಕುಮಾರ್, ನಾರಾಯಣಸ್ವಾಮಿ ಸೇರಿ ಇತರ ಜಿಲ್ಲಾ ಮುಖುಂಡರು ವಿರೋಧಿಸಿದ್ದರು. ಆದರೂ ಮುನಿಯಪ್ಪ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರದಲ್ಲಿ ಮುನಿಯಪ್ಪಗೆ ಟಿಕೆಟ್ ನೀಡದಂತೆ ಶಾಸಕರಾದ ರಮೇಶ್ ಕುಮಾರ್, ನಾರಾಯಣಸ್ವಾಮಿ ಸೇರಿ ಇತರ ಜಿಲ್ಲಾ ಮುಖುಂಡರು ವಿರೋಧಿಸಿದ್ದರು. ಆದರೂ ಮುನಿಯಪ್ಪ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
- ಬೀದರ್- ಈಶ್ವರ್ ಖಂಡ್ರೆ
- ದಾವಣಗೆರೆ- ಶಾಮನೂರು ಶಿವಶಂಕರಪ್ಪ
- ಬೆಂ- ದಕ್ಷಿಣ – ಗೋವಿಂದರಾಜ್
- ಕೊಪ್ಪಳ- ರಾಜಶೇಖರ ಹಿಟ್ನಾಳ್ (ಸಿದ್ದು ಆಪ್ತ)
- ಬಾಗಲಕೋಟೆ- ವೀಣಾ ಕಾಶಪ್ಪನವರ್
- ತುಮಕೂರು- ಖಾಲಿ
- ಧಾರವಾಡ – ಶಾಕಿರ್ ಸನದಿ/ ಸದಾನಂದ ಡಂಗಣ್ಣನವರ್
- ದಕ್ಷಿಣ ಕನ್ನಡ – ಮಿಥುನ್ ರೈ
- ಬೆಳಗಾವಿ- ಸಾದನವರ್
- ಹಾವೇರಿ- ಡಿ.ಆರ್. ಪಾಟೀಲ್