ಕೇಂದ್ರ ಸರ್ಕಾರ ಇಂಡಿಯನ್ ಆರ್ಮಿ ರೀತಿ ಪೋಸ್ ಕೊಡುತ್ತಿದೆ-ಎಸ್‍ಪಿ ಮುಖಂಡ ಆಖಿಲೇಶ್ ಯಾದವ್

ಲಕ್ನೋ, ಮಾ.22- ನಮ್ಮ ಸೇನಾಪಡೆಗಳು ಮತ್ತು ವೀರಯೋಧರ ಶಕ್ತಿ ಸಾಮಥ್ರ್ಯ ಮತ್ತು ತ್ಯಾಗವನ್ನು ಯಾರು ಪ್ರಶ್ನಿಸಲಾಗದು ಎಂದು ಹೇಳಿರುವ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಇದೇ ವೇಳೆ ಕೇಂದ್ರ ಸರ್ಕಾರ ಭಾರತೀಯ ಸೇನೆ ರೀತಿ ನಾಟಕವಾಡುವುದನ್ನು ನಿಲ್ಲಿಸಿ ಎಂದು ಸಲಹೆ ಮಾಡಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಮಾಜಿಮುಖ್ಯಮಂತ್ರಿ ಅಖಿಲೇಶ್ ಯಾದವ್ ಪುಲ್ವಾಮಾ ಉಗ್ರರ ದಾಳಿ ನಂತರ ಕೇಂದ್ರ ಸರ್ಕಾರ ಇಂಡಿಯನ್ ಆರ್ಮಿ ರೀತಿ ಪೋಸ್ ಕೊಡುತ್ತಿದೆ. ಈ ರೀತಿ ನಾಟಕವಾಡುವುದನ್ನ ನಿಲ್ಲಿಸಬೇಕು ಎಂದು ಹೇಳಿದರು.

ಪುಲ್ವಾಮಾ ದಾಳಿ ಒಂದು ಪೂರ್ವಯೋಜಿತ ಪಿತೂರಿ ಎಂಬ ತಮ್ಮ ಪಕ್ಷದ ನಾಯಕ ರಾಮ್‍ಗೋಪಾಲ್ ಯಾದವ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಖಿಲೇಶ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನೆಗಳನ್ನು ಕೇಳುವುದು ರಾಜಕಾರಣಿಗಳ ಮೂಲಭೂತ ಹಕ್ಕು ಎಂದು ತಿಳಿಸಿದ್ದಾರೆ. ನಮ್ಮ ಸೇನಾ ಪಡೆಗಳ ತ್ಯಾಗ ಮತ್ತು ಬಲಿದಾನವನ್ನು ಪ್ರಶ್ನಿಸುವ ಮಾತೇ ಇಲ್ಲ. ಆದರೆ ಇದೇ ವಿಷಯವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತೀಯ ಸೇನೆಯಂತೆ ವರ್ತಿಸುತ್ತಿದೆ. ಈ ನಾಟಕ ಬೇಡ ಎಂದು ಸಲಹೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ