ಸಿಯೋಲ್, ಮಾ.22- ದಕ್ಷಿಣ ಕೊರಿಯಾ ಪೊಲೀಸರು ರಾಜಧಾನಿ ಸಿಯೋಲ್‍ನಲ್ಲಿ ಅತಿ ದೊಡ್ಡ ಸ್ಪೈಕ್ಯಾಮ್(ರಹಸ್ಯಕ್ಯಾಮರಾ) ಸೆಕ್ಸ್ ಹಗರಣವನ್ನು ಬೇಧಿಸಿದ್ದಾರೆ. ಹೋಟೆಲ್‍ಗಳಲ್ಲಿ ತಂಗಿದ್ದ ಸುಮಾರು 800 ದಂಪತಿಗಳ ಸರಸ ಸಲ್ಲಾಪದ ದೃಶ್ಯಗಳನ್ನು ರಹಸ್ಯವಾಗಿ ಸೆರೆ ಹಿಡಿದು, ಅದನ್ನು ಸ್ಪೈಕ್ಯಾಮ್ ಮೂಲಕ ಲೈವ್ (ನೇರಪ್ರಸಾರ) ಮಾಡಲಾಗಿದೆ. ಇದರಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಈ ಸಂಬಂಧ ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು, ಮತ್ತಿಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ.
ದೇಶದ ಸ್ಪೈಕ್ಯಾಮೆರಾ ಪ್ರಕರಣಗಳಲ್ಲೇ ಇದು ಅತಿ ದೊಡ್ಡ ಪ್ರಕರಣ ಎಂದು ಸಿಯೋಲ್ ಪೊಲೀಸರು ಹೇಳಿದ್ದಾರೆ.
ಮಹಿಳೆಯರ ಶೌಚಾಲಯಗಳಲ್ಲಿ ಹಾಗೂ ಮಾಲ್‍ಗಳ ಟ್ರಯಲ್ ರೂಮ್ ನಲ್ಲಿ ಸ್ಪೈಕ್ಯಾಮೆರಾ ಬಳಸುವುದು ಸಾಮಾನ್ಯ. ಆದರೆ ಹೋಟೆಲ್‍ನಲ್ಲಿ ಸ್ಪೈಕ್ಯಾಮï ಬಳಸಿ, ಅದನ್ನು ಲೈವ್ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.
ಗ್ರಾಹಕರಿಗೆ ಗಮನಕ್ಕೆ ಬರದಂತೆ ಸುಮಾರು 30 ಹೋಟೆಗಳ 42 ರೂಮ್ ಗಳಲ್ಲಿ ಹೇರ್ ಡ್ರೈಯರ್, ಗೋಡೆ ಸಾಕೆಟ್ ಮತ್ತು ಡಿಜಿಟಲ್ ಟಿವಿ ಬಾಕ್ಸ್‍ಗಳಲ್ಲಿ ಸ್ಪೈಕ್ಯಾಮೆರಾ ಅವರನ್ನು ಅಳವಡಿಸಲಾಗಿತ್ತು. ಈ 42 ಕೊಠಡಿಗಳಲ್ಲಿ ನಡೆಯುವ ದೃಶ್ಯಗಳನ್ನು ವೆಬ್ ಸೈಟ್‍ವೊಂದು ತನ್ನ 4000 ಗ್ರಾಹಕರಿಗೆ 24 ಗಂಟೆಗಳ ಕಾಲ ಲೈವ್ ಮಾಡಿದೆ. ಈ ಲೈವ್ ವಿಡಿಯೋಗಾಗಿ ಗ್ರಾಹಕರು ಪ್ರತಿ ತಿಂಗಳು ಇಂತಿಷ್ಟು ಹಣ ಪಾವತಿಸಿದ್ದಾರೆ.
ಕಳೆದ ಮೂರು ತಿಂಗಳಿಂದ ಸುಮಾರು 800 ದಂಪತಿಗಳು ಸೆಕ್ಸ್‍ನಲ್ಲಿ ತೊಡಗಿದ್ದನ್ನು ವೆಬ್ ಸೈಟ್ ಮೂಲಕ ಲೈವ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು, ಮತ್ತಿಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.