ಎರಡು ಪ್ರತ್ಯೇಕ ಅಪಘಾತದಲ್ಲಿ ಏಳು ಮಂದಿಯ ಸಾವು

ಉತ್ತರಪ್ರದೇಶ, ಮಾ.22- ಎರಡು ಪ್ರತ್ಯೇಕ ಅಪಘಾತದಲ್ಲಿ ಒಟ್ಟು ಏಳು ಮಂದಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಬಲರಾಯ್‍ಪುರ ಮತ್ತು ಬಹ್ಲಿ ಜಿಲ್ಲೆಗಳಲ್ಲಿ ಸಂಭವಿಸಿದೆ.

ಹೋಳಿ ಹಬ್ಬ ಆಚರಿಸಿ ಬರುತ್ತಿರುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಸಾವಿಗೀಡಾಗಿರುವ ದುರ್ಘಟನೆ ಬಲರಾಯ್‍ಪುರ ಪ್ರದೇಶದಲ್ಲಿ ನಡೆದಿದೆ. ಅನುಜ ಕುಶಾಲ ಮತ್ತು ಲಡ್ಡು ಮೃತರು ಎಂದು ತಿಳಿದು ಬಂದಿದ್ದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಗುರುವಾರ ತಡರಾತ್ರಿ ಸಹಪದರ ಬಳಿ ಬೈಕ್ ಮರಕ್ಕೆ ಡಿಕ್ಕಿಯಾಗಿ ಅಣ್ಣ-ತಂಗಿ ಸ್ಥಳದಲ್ಲಿ ಅಸುನಿಗಿದ್ದರೂ ಇತ್ತ ಮನಿರ್ಯೊ ಪ್ರದೇಶದಲ್ಲಿ ಬೈಕ್ ಮತ್ತು ಟೆಂಪೊ ನಡುವೆ ಡಿಕ್ಕಿಯಾಗಿ ಮೂವರು ಕೊನೆಯುಸಿರೆಳೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ