ಅಲ್ಬೇನಿಯಾ, ಮಾ.22- ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಕೋಟ್ಯಂತರ ವಂಚಿಸಿ ಆರ್ಥಿಕ ಅಪರಾಧಿಯಾಗಿ ಲಂಡನ್‍ನಲ್ಲ ಆಶ್ರಯ ಪಡೆದಿದ್ದ ವಜ್ರೋದ್ಯಮಿ ನೀರವ್ ಮೋದಿ ಬಂಧನದ ಬೆನ್ನಲ್ಲೇ ಮತ್ತೊಬ್ಬ ಮಹಾವಂಚಕ ಹಿತೇಶ್ ಪಟೇಲ್‍ನನ್ನು ಅಲ್ಬೇನಿಯಾದಲ್ಲಿ ಸೆರೆ ಹಿಡಿಯಲಾಗಿದೆ.
100ಕೋಟಿ ರೂ.ಗಳಿಗೂ ಹೆಚ್ಚು ಹಣ ವಂಚಿಸಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಸ್ಟಲ್ರ್ರಿಂಗ್ ಬಯೋಟೆಕ್ ಲಿಮಿಟೆಡ್ (ಎಸ್‍ಬಿಐ)ಪ್ರವರ್ತಕ ಹಿತೇಶ್ ಪಟೇಲ್‍ನನ್ನು ಅಲ್ಬೇನಿಯಾದಲ್ಲಿ ಬಂಧಿಸಲಾಯಿತು.
ಆರ್ಥಿಕ ಅಪರಾಧಗಳ ಅಡಿ ಪಿಎಮ್‍ಎಲ್‍ಎ ಕಾಯ್ದೆಯಡಿ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪಟೇಲ್‍ನನ್ನು ಬಂಧಿಸಿ ಭಾರತಕ್ಕೆ ಕರೆತರುವ ಪ್ರಯತ್ನ ಜಾರಿ ನಿರ್ದೇಶನಾಲಯ(ಇಡಿ)ತೀವ್ರಗೊಳಿಸಿತ್ತು. ಈ ಸಂಬಂಧ ಇಂಟರ್ಪೋಲ್ ಪೊಲೀಸರ ನೆರವು ಕೋರಿತ್ತು.
ಹಿತೇಶ್ ಪಟೇಲ್‍ನನ್ನು ಬಂಧಿಸಲು ನ್ಯಾಯಾಲಯ ಸೂಚನೆ ಮೇರೆಗೆ ಬಂಧಿಸಲಾಗಿದೆ.