ನವದೆಹಲಿ, ಮಾ.22- ರಾಜಧಾನಿ ದೆಹಲಿಯ ಪಾಕ್ ರಾಯಭಾರಿ ಕಚೇರಿಯಲ್ಲಿ ನಡೆಯಲಿರುವ ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯನ್ನು ಬಹಿಷ್ಕರಿಸಲು ಭಾರತ ನಿರ್ಧರಿಸಿದೆ.
ಈ ಸಮಾರಂಭಕ್ಕೆ ಜಮ್ಮು ಮತ್ತು ಕಾಶ್ಮೀರದ ಹುರಿಯತ್ ಪ್ರತ್ಯೇಕತಾವಾದಿ ಸಂಘಟನೆಗಳ ನಾಯಕರನ್ನು ಪಾಕಿಸ್ತಾನ ಆಹ್ವಾನಿಸಿರುವುದೇ ಭಾರತದ ಬಹಿಷ್ಕಾರಕ್ಕೆ ಕಾರಣ.
ಪ್ರತಿ ವರ್ಷ ದೆಹಲಿಯ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ದಿನಾಚರಣೆಯಲ್ಲಿ ಕೇಂದ್ರ ಸಚಿವರ ಮಟ್ಟದ ಅತಿಥಿಯೊಬ್ಬರು ಭಾಗವಹಿಸುತ್ತಿದ್ದರು.
ಆದರೆ, ಪುಲ್ವಾಮ ಉಗ್ರರ ದಾಳಿ ಮತ್ತು ಈ ಕಾರ್ಯಕ್ರಮಕ್ಕೆ ಕಾಶ್ಮೀರದ ಪ್ರತ್ಯಕತಾವಾದಿ ನಾಯಕರಿಗೆ ಆಮಂತ್ರಣ ನೀಡಿರುವುದರಿಂದ ನಾಳೆ ನಡೆಯಲಿರುವ ಈ ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.