ಬೆಂಗಳೂರು:ನಿಯಮಗಳ ಪ್ರಕಾರ ಬಿಎಂಟಿಸಿ ವ್ಯಾಪ್ತಿಯಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ನೀಡುವಂತಿಲ್ಲ. ಇದನ್ನು ಈಗಾಗಲೇ ನಿಯಮಗಳನ್ನು ಮೀರಿದ್ದರಿಂದ ಓಲಾ ಕಂಪನಿಗೆ ಸೇರಿದ್ದ 5 ಬೈಕ್ ಟ್ಯಾಕ್ಸಿಯನ್ನು ಸಾರಿಗೆ ಇಲಾಖೆ ವಶಪಡಿಸಿ ನೋಟಿಸ್ ನೀಡಿದ್ದರೂ ಉತ್ತರ ನೀಡದೆ ನಿರ್ಲಕ್ಷ್ಯ ವಹಿಸಿದ್ದಕ್ಕೆ ಸೇವೆಯನ್ನು ರದ್ದು ಮಾಡಲಾಗಿದೆ ಆರ್ಟಿಒ ನಿಯಮಗಳನ್ನು ಗಾಳಿಗೆ ತೂರಿದ್ದಕ್ಕೆ ಆರು ತಿಂಗಳು ಕಾಲ ರಾಜಧಾನಿಯಲ್ಲಿ ಓಲಾ ಸೇವೆಯನ್ನು ರದ್ದು ಮಾಡಿ ಸಾರಿಗೆ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.
ಪರವಾನಗಿಯನ್ನು ರದ್ದುಗೊಳಿಸಿ ಸಾರಿಗೆ ಇಲಾಖೆಯ ಆಯುಕ್ತ ಇಕ್ಕೇರಿ ಆದೇಶ ಹೊರಡಿಸಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಬೈಕ್ ಟ್ಯಾಕ್ಸಿ ಓಲಾ ಸೇವೆಯನ್ನು ಸಾರಿಗೆ ಇಲಾಖೆ ರದ್ದು ಮಾಡಿದೆ. ಉಳಿದಂತೆ ಆಪ್ ಆಧಾರಿತ ಟ್ಯಾಕ್ಸಿ ಸೇವೆಗೆ ಅನುವು ಮಾಡಿಕೊಡಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.