ಐಪಿಎಲ್ನಲ್ಲಿ ದಾಖಲೆಗಳನ್ನ ಬರೆಯಲಿದ್ದಾರೆ ಮಾಹಿ: ನಾಲ್ಕು ಪ್ರಮುಖ ದಾಖಲೆಗಳನ್ನ ಬರೆಯಲಿದ್ದಾರೆ ಧೋನಿ

ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಇತಿಹಾಸದಲ್ಲೇ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್. ಅಲ್ಲದೆ ತನ್ನದೇ ಆದ ನಾಯಕತ್ವ ಗುಣಗಳಿಂದ ಐಪಿಎಲ್ನಲ್ಲಿ ಟ್ರೇಡ್ ಮಾರ್ಕ್ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿಯೇ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಕ್ಸಸ್ ಆಗಲು ಕಾರಣ. ಮಹೇಂದ್ರ ಸಿಂಗ್ ಧೋನಿಯ ಚಾಣಕ್ಷತೆ, ವಿಕೆಟ್ ಕೀಪಿಂಗ್, ನಾಯಕತ್ವ, ಬ್ಯಾಟಿಂಗ್ನಿಂದ ಅವರೊಬ್ಬ ಟಿ20 ಫುಲ್ ಪ್ಯಾಕೇಜ್ ಎಂದು ಹೇಳಬಹುದು. ಇನ್ನೂ ಈ ರಾಂಚಿಯ ರಾಕ್ಸ್ಟಾರ್ ಹೆಸರಿನಲ್ಲಿ ಹಲವು ದಾಖಲೆಗಳಿವೆ. ಆದ್ರೆ, ಈ ಬಾರಿಯ ಐಪಿಎಲ್ನಲ್ಲಿ ಅವರು ಅಪರೂಪದ ದಾಖಲೆಗಳನ್ನು ಬರೆಯಲು ರಾಂಚಿ ಱಂಬೋ ಸಿದ್ಧರಾಗಿದ್ದಾರೆ.

ಧೋನಿ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್ ಎನ್ನೋದಕ್ಕೆ ಕಳೆದ ವರ್ಷದ  ಐಪಿಎಲ್ ಟೂರ್ನಿಯೇ ಸಾಕ್ಷಿ. 2 ವರ್ಷದ ನಿಷೇಧದ ಬಳಿಕ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಐಪಿಎಲ್ ಸೇರಿಕೊಂಡಿತು. ಇಷ್ಟೇ ಅಲ್ಲ ಧೋನಿ ನೇತೃತ್ವದ ಸಿಎಸ್‌ಕೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಈಗ ಇತಿಹಾಸ. ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗುವಲ್ಲಿ ನಾಯಕ ಧೋನಿ ಪಾತ್ರ ಪ್ರಮುಖ. ಧೋನಿ ಓರ್ವ ಆಟಗಾರನಾಗಿ, ನಾಯಕನಾಗಿ ಪಂದ್ಯವನ್ನು ಚೆನ್ನಾಗಿ ಗ್ರಹಿಸ್ತಾರೆ. ವಿಕೆಟ್ ಹಿಂದೆ ನಿಂತು ಬೌಲರ್ಗಳಿಗೆ ಉಪಯುಕ್ತ ಸಲಹೆ ನೀಡೋ ಮೂಲಕ ಪಂದ್ಯ ಗೆಲ್ಲಿಸಿಕೊಳ್ಳುತ್ತಾರೆ. ಹೀಗಾಗಿಯೇ ಧೋನಿ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್ ಆಗಿದ್ದಾರೆ.

ಶತಕದ ಗೆಲುವಿಗೆ ಇನ್ನು ಆರು ಗೆಲುವು
2008ರ ಚೊಚ್ಚಲ ಆವೃತ್ತಿಯಿಂದ ಐಪಿಎಲ್ ಟೂರ್ನಿಯಲ್ಲಿ ಸಕ್ರೀಯವಾಗಿರೋ ಧೋನಿ ನಾಯಕನಾಗಿ 159 ಪಂದ್ಯಗಳಲ್ಲಿ ಚೆನ್ನೈತಂಡವನ್ನ ಮುನ್ನಡೆಸಿದ್ದಾರೆ. ಇದರಲ್ಲಿ ಧೋನಿ 94 ಗೆಲುವು ಸಾಧಿಸಿದ್ರೆ. 100 ಗೆಲುವಿಗೆ ಇನ್ನು ಕೇವಲ 6 ಗೆಲುವು ಮಾತ್ರ ಬೇಕಿದೆ. ಇನ್ನೂ ಈ ಬಾರಿಯ ಐಪಿಎಲ್ನಲ್ಲಿ ಈ ದಾಖಲೆಯನ್ನು ಮಹೇಂದ್ರ ಸಿಂಗ್ ಧೋನಿ ಬರೆಯಲಿದ್ದಾರೆ.

ಅತಿ ಹೆಚ್ಚು ಸ್ಟಂಪ್ ಔಟ್ ಮಾಡಲಿರುವ ಎಂಎಸ್ಡಿ
ಧೋನಿ ವಿಕೆಟ್ ಹಿಂದೆ ನಿಂತ್ರೆ ಸಾಕು ಬ್ಯಾಟ್ಸ್ಮನ್ಗಳು ಕ್ರೀಸ್ ಬಿಟ್ಟು ಕದಲೋಕ್ಕು ಹೆದರುತ್ತಾರೆ.ಧೋನಿಗಿಂತ ವೇಗವಾಗಿ ಸ್ಟಂಪ್ ಮಾಡೋ ವಿಕೆಟ್ ಕೀಪರ್ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಲ್ಲ. ಆದರೆ ಐಪಿಎಲ್ ಕ್ರಿಕೆಟ್‌ನಲ್ಲಿ ಗರಿಷ್ಠ ಬ್ಯಾಟ್ಸ್‌ಮನ್‌ಗಳನ್ನ ಬಲಿ ಪಡೆದ ಕೀರ್ತಿಗೆ ದಿನೇಶ್ ಕಾರ್ತಿಕ್ ಪಾತ್ರರಾಗಿದ್ದಾರೆ.

ವಿಕೆಟ್ ಹಿಂದೆ ದಿನೇಶ್ ಕಾರ್ತಿಕ್ 124 ಬ್ಯಾಟ್ಸ್‌ಮನ್‌ಗಳನ್ನ ಬಲಿಪಡೆದಿದ್ದಾರೆ. ಐಪಿಎಲ್ ಕ್ರಿಕೆಟ್‌ನಲ್ಲಿ ಧೋನಿ ಒಟ್ಟು 116 ಬ್ಯಾಟ್ಸ್‌ಮನ್‌ಗಳನ್ನ ಬಲಿಪಡೆದಿದ್ದಾರೆ. ಚೆನ್ನೈ ತಲೈವಾ ಇನ್ನು 8 ಸ್ಟಂಪ್ ಮಾಡಿದ್ರೆ ಕಲ್ಲರ್ಫುಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ.

200ನೇ ಸಿಕ್ಸರ್ ಸನಿಹದಲ್ಲಿ ರಾಂಚಿ ಲೈಯನ್
ಐಪಿಎಲ್ನಲ್ಲಿ ಈ ಹಿಂದೆ ಮಿಸ್ಟರ್ ಕೂಲ್ ಧೋನಿ ಸಿಕ್ಸರ್ಗಳ ಸುರಿಮಳೆಗೈದಿದ್ದಾರೆ. ಐಪಿಎಲ್ನಲ್ಲಿ ಒಟ್ಟು ಧೋನಿ 186 ಸಿಕ್ಸರ್ ಸಿಡಿಸಿದ್ದಾರೆ. ಹೀಗಾಗಿ 12ನೇ ಆವೃತ್ತಿಯಲ್ಲಿ ಧೋನಿ 200 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಆದರೆ ಧೋನಿಗೆ ಈ ಬಾರಿ ತಂಡದ ಸಹ ಆಟಗಾರ ಸುರೇಶ್ ರೈನಾ, ರೋಹಿತ್ ಶರ್ಮಾ ಕೂಡ 200ನೇ ಸಿಕ್ಸರ್ ಬಾರಿಸುವ ರೇಸ್ನಲ್ಲಿದ್ದು, ಯಾರು 200ನೇ ಸಿಕ್ಸರ್ ಬಾರಿಸ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಅತಿ ಹೆಚ್ಚು ಟ್ರೋಫಿ ಗೆದ್ದ ನಾಯಕ ಆಗಲಿದ್ದಾರೆ ಚೆನ್ನೈ ತಲೈವಾ
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ 3 ಐಪಿಎಲ್ ಟ್ರೋಫಿ ಗೆದ್ದಿದ್ದಾರೆ. ಇನ್ನು 10 ಆವೃತ್ತಿಗಳಲ್ಲಿ 9 ಬಾರಿ ಸೆಮಿಫೈನಲ್ ಪ್ರವೇಶಿಸಿದೆ. ಇದೀಗ 4ನೇ ಆವೃತ್ತಿ ಪ್ರಶಸ್ತಿ ಮೇಲೆ ಕಣ್ಣಟ್ಟಿದೆ. ಇತ್ತ ಮುಂಬೈ ಇಂಡಿಯನ್ಸ್ ಕೂಡ 3 ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಈ ಬಾರಿ ಸಿಎಸ್‌ಕೆ ಮತ್ತೆ ಟ್ರೋಫಿ ಗೆದ್ದರೆ ನಾಲ್ಕನೆ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ಹಿರಿಮೆಗೆ ಪಾತ್ರವಾಗಲಿದ್ದು ಧೋನಿಗೆ ಈ credit ಹೋಗಲಿದೆ.

ಒಟ್ಟಾರೆ ಈಗ ಎಲ್ಲ ಕ್ರಿಕೆಟ್ ಅಭಿಮಾನಿಗಳ ಕಣ್ಣು ಚೆನ್ನೈ ತಲೈವಾ ಧೋನಿ ಮೇಲೆ ನೆಟ್ಟಿದ್ದು ಈ ಬಾರಿಯ ಸೀಸನ್ನಲ್ಲಿ ಮಾಹಿಯಿಂದ ಒಳ್ಳೆಯ ಪರ್ಫಾಮನ್ಸ್ ನ್ನ ನಿರೀಕ್ಷಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ