ಇತ್ತಿಚೆಗಷ್ಟೆ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನ ಕೈಚೆಲ್ಲಿಕೊಂಡಿದ್ದ ಟೀಂ ಇಂಡಿಯಾ ಭಾರೀ ಮುಖಭಂಗ ಅನುಭವಿಸಿತ್ತು. ಸರಣಿಯಲ್ಲಿ ಕೊನೆಯ ಮೂರು ಪಂದ್ಯಗಳನ್ನ ಸತತವಾಗಿ ಸೋತು ಸರಣಿಯನ್ನ ಕಯಚೆಲ್ಲಿ ಕೊಂಡಿತ್ತು.
ದೆಹಲಿಯ ಫೀರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಕೊಹ್ಲಿ ಪಡೆ 273 ರನ್ಗಳ ಸುಲಭ ಟಾರ್ಗೆಟ್ನ್ನ ಬೆನ್ನತ್ತಲಾಗದೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆಸಿಸ್ ಸರಣಿ ಸೋಲಿಗೆ ಕಾರಣವಾಗಿದ್ದು ತಂಡದ ಮಿಡ್ಲ್ ಆಡ್ರ್ರ್ ಬ್ಯಾಟಿಂಗ್ ಲೈನ್ಅಪ್.
ಅದರಲ್ಲೂ ತಂಡದ ಬ್ಯಾಟಿಂಗ್ ನಂ.4 ತಂಡದ ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆ ನೋವಾಗಿದೆ. ಕಳೆದ ಚಾಂಪಿಯನ್ಸ್ ಟ್ರೋಫಿಯಿಂದ ಈ ಸ್ಲಾಟ್ನಲ್ಲಿ ಬರೋಬ್ಬರಿ 11 ಬ್ಯಾಟ್ಸ್ಮನ್ಗಳು ಆಡಿದ್ದಾರೆ.
ಯುವರಾಜ್ ಸಿಂಗ್, ದಿನೇಶ್ ಕಾರ್ತಿಕ್, ಎಂ.ಎಸ್.ಧೋನಿ, ಕೇದಾರ್ ಜಾಧವ್, ಅಂಬಟಿ ರಾಯ್ಡು, ರಿಷಬ್ ಪಂತ್ , ಶ್ರೇಯಸ್ ಅಯ್ಯರ್ , ಕ್ಯಾಪ್ಟನ್ ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಅಜಿಂಕ್ಯ ರಹಾನೆ ಮತ್ತು ಮನೀಶ್ ಪಾಂಡೆ ಆಡಿದ್ದಾರೆ. ಈ ಯಾವ ಬ್ಯಾಟ್ಸ್ಮನ್ಗಳು ಗಟ್ಟಿಯಾಗಿ ನಿಲ್ಲಲಿಲ್ಲ .
ಕಳೆದ ಎರಡು ವರ್ಷಗಳಿಂದ ಈ ಸ್ಲಾಟ್ನಲ್ಲಿ ಕೇವಲ ಒಂದು ಶತಕ ಮಾತ್ರ ದಾಖಲಾಗಿವೆ. ಈ ಶತಕವನ್ನ ಅಂಬಟಿ ರಾಯ್ಡು ಕಳೆದ ವರ್ಷ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿದ್ರು. ಸದ್ಯ ನಂ.4ನಲ್ಲಿ ಆಡಿದ ಅಂಬಾಟಿ ರಾಯ್ಡು ಇತ್ತಿಚೆಗೆ ಕಿವೀಸ್ ಮತ್ತು ಆಸಿಸ್ ವಿರುದ್ಧದ ಸರಣಿಯಲ್ಲಿ ಫ್ಲಾಪ್ ಆಗಿದ್ರು. ಆಸಿಸ್ ವಿರುದ್ಧದ ಮೂರು ಪಂದ್ಯಗಳಿಂದ ರಾಯ್ಡು ಗಳಿಸಿದ್ದು ಕೇವಲ 33 ರನ್.
ಚರ್ಚೆಗೆ ಗ್ರಾಸವಾಯಿತು ನಂ.4 ಬ್ಯಾಟಿಂಗ್ ಕ್ರಮಾಂಕ
ಅಂಬಟಿ ರಾಯ್ಡು ನಂ.4ನಲ್ಲಿ ಫ್ಲಾಪ್ ಆಗುತ್ತಿದ್ದಂತೆ ವಿಶ್ವಕಪ್ನಲ್ಲಿ ಯಾರು ಆ ಸ್ಲಾಟ್ನಲ್ಲಿ ಆಡಬೇಕೆಂದು ಚೆರ್ಚೆ ಶುರುವಾಗಿತ್ತು. ಕೋಚ್ ರವಿ ಶಾಸ್ತ್ರಿ ಕ್ಯಾಪ್ಟನ್ ಕೊಹ್ಲಿ ಆಡಲಿ ಎಂದು ಸಲಹೆ ಕೊಟ್ಟಿದ್ರು. ಆದರೆ ಇದಕ್ಕೆ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ವಿರೋಧ ವ್ಯಕ್ತಪಡಿಸಿದ್ರು. ಯಾಕಂದ್ರೆ ಕ್ಯಾಪ್ಟನ್ ಕೊಹ್ಲಿ ಸಕ್ಸಸ್ ಕಂಡಿದ್ದು ನಂ.3 ಸ್ಲಾಟ್ನಲ್ಲಿ . ಹೀಗಾಗಿ ನಂ.4ರ ಕಗ್ಗಂಟಿಗೆ ಬಿಸಿಸಿಐ ಉತ್ತರಿಸಬೇಕಿತ್ತು.
ನಾಲ್ಕರ ನರಳಾಟಕ್ಕೆ ಪರಿಹಾರ ಕೊಟ್ಟ ಬಿಸಿಸಿಐ
ಹೌದು ಮೊನ್ನೆಯವರೆಗೂ ಸಮಸ್ಯೆಯಾಗಿದ್ಧ ನಾಲ್ಕರ ಬ್ಯಾಟಿಂಗ್ ಸ್ಲಾಟ್ಗೆ ಕೊನೆಗೂ ಬಿಸಿಸಿಐ ಪರಿಹಾರ ಕಂಡು ಹಿಡಿದಿದೆ. ಬಿಸಿಸಿಐನ ಪ್ರಕಾರ ನಾಲ್ವರು ಬ್ಯಾಟ್ಸ್ಮನ್ಗಳ ಪೈಕಿ ಒಬ್ಬರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಅಷ್ಟಕ್ಕೂ ಈ ನಾಲ್ಕು ಬ್ಯಾಟ್ಸ್ಮನ್ ಗಳು ಯಾರಂಬ ಕುತೂಹಲ ನಿಮ್ಮಲ್ಲಿದೆ ಈ ಬ್ಯಾಟ್ಸ್ಮನ್ಗಳು ಬೇರೆ ಯಾರು ಅಲ್ಲ ಕನ್ನಡಿಗ ಕೆ.ಎಲ್. ರಾಹುಲ್, ಅಂಬಟಿ ರಾಯ್ಡು , ಅಜಿಂಕ್ಯ ರಹಾನೆ ಮತ್ತು ಶ್ರೇಯಸ್ ಅಯ್ಯರ್.
ಇತ್ತಿಚೆಗೆ ಅಜಿಂಕ್ಯ ರಹಾನೆ ಮತ್ತು ಶ್ರೇಯಸ್ ಅಯ್ಯರ್ ನಂ.4ನಲ್ಲಿ ಆಡಲು ರೆಡಿ ಅಂದಿದ್ರು. ಅಂಬಟಿ ರಾಯ್ಡು ಫ್ಲಾಪ್ ಪರ್ಫಾಮನ್ಸ್ ಕೊಟ್ಟು ತಮ್ಮ ಕರಿಯರ್ಗೆ ತಾವೇ ಕುತ್ತು ತಂದುಕೊಟ್ಟಿದ್ರು. ಇದಕ್ಕಾಗಿ ಈ ಬ್ಯಾಟ್ಸ್ಮನ್ಗಳು ಐಪಿಎಲ್ನಲ್ಲಿ ರನ್ ಹೊಳೆಯನ್ನೆ ಹರಿಸಬೇಕಿದೆ.
ಒಟ್ಟಾರೆ ಈ ನಾಲ್ಕು ಆಟಗಾರರ ಪೈಕಿ ಯಾರಿಗೆ ಲಂಡನ್ ಟಿಕೆಟ್ ಸಿಗಲಿದೆ. ಅನ್ನೋದೇ ಕೌತುಕದ ವಿಷಯವಾಗಿದೆ.