ಐಡಿಎಸ್‍ಎಂಟಿ ಯೋಜನೆಯ ಅಡಿಯಲ್ಲಿ ಹಂಚಿಕೆಯಾಗಿದ್ದ ನಿವೇಶನಗಳ ಲೋಪದೋಷ-ಸರಿಪಡಿಸಲು ಮುಂದಾಗಿರುವ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್

ಚಿಕ್ಕಬಳ್ಳಾಪುರ, ಮಾ.20- ಕಳೆದ ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಗರದ ಐಡಿಎಸ್‍ಎಂಟಿ ಯೋಜನೆಯ ಅಡಿಯಲ್ಲಿ ಹಂಚಿಕೆಯಾಗಿದ್ದ ನಿವೇಶನಗಳ ಲೋಪದೋಷಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಅವರು ಮುಂದಾಗಿದ್ದಾರೆ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿದ್ದ ಐಡಿಎಸ್‍ಎಂಟಿ ಅದಾಲತ್ ನಲ್ಲಿ ಮಾತನಾಡಿದ ಅವರು, ಈ ಲೇಔಟಿನ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದ್ದು ಅನೇಕರು ಜಿಲ್ಲಾಧಿಕಾರಿ ಹಾಗೂ ನಗರಸಭೆ ಕಚೇರಿಗೆ ಅಲೆದಾಡಿರುವುದು ಸರ್ವೆಸಾಮಾನ್ಯವಾಗಿದ್ದರಿಂದ ಇದಕ್ಕೆ ಶಾಶ್ವತವಾಗಿ ಪರಿಹಾರ ಕಂಡುಕೊಡುವ ನಿಟ್ಟಿನಲ್ಲಿ ಪ್ರತಿ ಮಂಗಳವಾರ ಉಪ-ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಐಡಿಎಸ್‍ಎಂಟಿ ಅದಾಲತ್ ಏರ್ಪಡಿಸಿ ಇದರ ಮೂಲಕ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಪಡಿಸಬೇಕೆಂದು ಸೂಚಿಸಲಾಗಿದೆ ಎಂದರು.

ಐಡಿಎಸ್‍ಎಂಟಿ ಯೋಜನೆಯಡಿಯ ನಿವೇಶನಗಳನ್ನು ವಿಗಂಡಿಸಿ ಹಾಗೂ ಬಡ ಹಾಗೂ ಮದ್ಯಮ ವರ್ಗದವರಿಗೆ ಕಳೆದ 10 ವರ್ಷಗಳ ಹಿಂದೆಯೇ ಹಂಚಿಕೆ ಮಾಡಲಾಗಿದ್ದು ಹಂಚಿಕೆ ಮಾಡಲಾಗಿದ್ದ ನಿವೇಶನಗಳ ಪೈಕಿ ಹಲವಾರು ನಿವೇಶನಗಳು ಅಧಿಕಾರಿಗಳ ಅಚಾತುರ್ಯದಿಂದ ಒಂದೇ ನಿವೇಶನ ಇಬ್ಬಿಬ್ಬರಿಗೆ ನೊಂದಣಿ, ನೊಂದಾವಣೆಯಾಗಿದ್ದ ಈವರೆವಿಗೂ ಸ್ಥಳ ತೋರಿಸದಿರುವುದು, ಖಾಸಗಿ ಜಮೀನಿನಲ್ಲಿ ನಿವೇಶನಗಳನ್ನು ಗುರ್ತಿಸಿ ಹಂಚಿಕೆ ಮಾಡಿರುವುದು, ನೊಂದಾವಣೆಯಾಗಿ ಖಾತೆ ಆಗದಿರುವುದೂ ಸೇರಿದಂತೆ ಇನ್ನು ಅನೇಕ ಸಮಸ್ಯೆಗಳು ಕಂಡು ಬಂದಿದ್ದು ಹಂತ-ಹಂತವಾಗಿ ಈ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಿ ಪರಿಹಾರ ಕಂಡುಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಅದಾಲತ್‍ನಲ್ಲಿ ಸರಿಸುಮಾರು 20ಕ್ಕೂ ಆಧಿಕ ಐಡಿಎಸ್‍ಎಂಟಿ ನಿವೇಶನ ಪಡೆದಿದ್ದ ಫಲಾನುಭವಿಗಳು ಪಾಲ್ಗೊಂಡಿದ್ದರು.

ಈ ವೇಳೆ ಉಪವಿಭಾಗಾಧಿಕಾರಿ ಶಿವಸ್ವಾಮಿ, ನಗರಕೋಶಾಧಿಕಾರಿ ನಟರಾಜ್, ನಗರಾಭಿವೃದ್ದಿ ಪ್ರಾಧಿಕಾಕಾರದ ಕೃಷ್ಣಪ್ಪ ಪೌರಾಯುಕ್ತ ಉಮಾಕಾಂತ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ