ಕಳೆದ ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯೂ ಚಾಂಪಿಯನ್ನಾಗಿ ಮೆರೆದಾಡಲು ಮತ್ತೊಮ್ಮೆ ಸಜ್ಜಾಗಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಹೇಗೆಲ್ಲಾ ಸೌಂಡ್ ಮಾಡಿ ಗಮನ ಸೆಳೆದಿದೆ ಅನ್ನೋದನ್ನ ತೋರಿಸ್ತೀವಿ ನೋಡಿ.
ತವರಲ್ಲಿ ಚೆನ್ನೈ ತಂಡಕ್ಕೆ ಭರ್ಜರಿ ಸ್ವಾಗತ ಕೊಟ್ಟ ಅಭಿಮಾನಿಗಳು
ಕಲ್ಲರ್ಫುಲ್ ಟೂರ್ನಿ ಐಪಿಎಲ್ಗೆ ಇನ್ನು ಎರಡು ದಿನ ಬಾಕಿ ಇದೆ. ಈ ಬಾರಿ ಎಲ್ಲರ ಬಿಂದುವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತವರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ತಂಡದ ಯಜಮಾನ ಧೋನಿಗೆ ತವರಿನ ಅಭಿಮಾನಿಗಳು ಇನ್ನಿಲ್ಲದ ಪ್ರೀತಿ ತೋರಿಸಿ ಮತ್ತೆ ಕಿಂಗ್ ಆಗಿ ಮೆರೆದಾಡಲು ಹುಮ್ಮಸ್ಸು ತುಂಬಿದ್ದಾರೆ. ತಂಡವನ್ನ ಮ್ತತೆ ಚಾಂಪಿಯನ್ ಮಾಡಲು ಪಣತೊಟ್ಟಿರುವ ಸಿಎಸ್ಕೆ ಅಭಿಮಾನಿಗಳು ಆಟಗಾರರನ್ನ ಮತ್ತೆ ಹುರಿದುಂಬಿಸಿ ತಾವು ಖುಷಿ ಪಡುತ್ತಿದ್ದಾರೆ.
ಚೆನ್ನೈ ಜನರಿಗೆ ತಮ್ಮ ತವರು ತಂಡ ಚೆನ್ನೈ ಸೂಪರ್ ಕಿಂಗ್ಸ್ ಅಂದ್ರೆ ಇನ್ನಿಲ್ಲದ ಪ್ರೀತಿ. ಅದರಲ್ಲೂ ಧೋನಿಯಂದ್ರೆ ಪಂಚಪ್ರಾಣ. ತವರು ತಂಡವನ್ನ ಮೂರು ಬಾರಿ ಗೆಲ್ಲಿಸಿರುವ ಧೋನಿಯನ್ನ ಚೆನ್ನೈ ಜನರು ಪ್ರೀತಿಯಿಂದ ತಲೈವಾ ಅಂತಾ ಕರೆಯುತ್ತಾರೆ. ಧೋನಿ ಜೊತೆ ಸೆಲ್ಪೀ ತೆಗೆದುಕೊಳ್ಳುವುದಕ್ಕಾಗಿ ಮೈದಾನದೊಳಗೆ ನುಗ್ಗುತ್ತಾರೆ.
ತಂಡದ ಯಜಮಾನ ಧೋನಿಗೆ ಭರ್ಜರಿ ಸ್ವಾಗತ
ತಂಡದ ಯಜಮಾನ ಧೋನಿ ಮೊನ್ನೆ ಚೆಪಾಕ್ ಅಂಗಳಕ್ಕೆ ಬಂದಾಗ ಧೋನಿಗೆ ಅದ್ದೂರಿ ಸ್ವಾಗತ ಸಿಕ್ಕಿತ್ತು. ಧೋನಿಗೆ ಸಿಕ್ಕ ಆತಿಥ್ಯವನ್ನ ಕಂಡು ಸ್ವತಃ ಅಲ್ಲಿದ್ದವರೇ ಅಚ್ಚರಿ ಪಟ್ರು. ಕಳೆದ ವರ್ಷವಷ್ಟೆ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟ ನನೆಪು ಹಾಗೆ ಇರುವಾಗ ಇದಿಗ ಮತ್ತೊಮ್ಮೆ ಧೋನಿ ಅಂಡ್ ಟೀಂ ಮತ್ತೆ ಐಪಿಎಲ್ ಆಡಲು ಬಂದಿದೆ. ಈ ಬಾರಿಯೂ ತಂಡ ಮತ್ತೆ ಚಾಂಪಿಯನ್ನಾಗಿ ಆಗಲಿ ತಂಡಕ್ಕೆ ಹುರುಪು ತುಂಬಿದ್ದಾರೆ.
ಅಭ್ಯಾಸ ಪಂದ್ಯ ವೀಕ್ಷಿಸಲು ಬಂದಿದ್ರು 12 ಸಾವಿರ ಅಭಿಮಾನಿಗಳು
ಚೆಪಾಕ್ ಕ್ರೀಡಾಂಗಣದಲ್ಲಿ ತಂಡ ಅಭ್ಯಾಸ ಪಂದ್ಯವೊಂದನ್ನು ಆಡಿತು. ಸಿಎಸ್ಕೆ ಆಟಗಾರರನ್ನೇ ಎರಡು ತಂಡಗಳಾಗಿ ವಿಂಗಡಿಸಿ ಪಂದ್ಯ ಆಡಿಸಲಾಯಿತು. ಈ ಪಂದ್ಯವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಕ್ರೀಡಾಂಗಣದ ಒಳಕ್ಕೆ ಪ್ರವೇಶಿಸುವ ವೇಳೆ ನೂಕು ನುಗ್ಗಲು ಸಹ ಸಂಭವಿಸಿತು ಎನ್ನಲಾಗಿದೆ.
ಆ್ಯಂಥಮ್ ಸಾಂಗ್ಗೆ ಭರ್ಜರಿ ಸ್ಟೆಪ್ಸ್ ಹಾಕಿದ್ರು ಸಿಎಸ್ಕೆ ಆಟಗಾರರು
ಡಿಫೆಂಡಿಂಗ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಪ್ರಾಕ್ಟೀಸ್ ಜೊತೆಗೆ ಡ್ಯಾನ್ಸ್ ಕೂಡ ಮಾಡಿ ಮಜಾ ಮಾಡಿದ್ದಾರೆ. ಸಿಎಸ್ಕೆ ಆ್ಯಂಥಮ್ ಸಾಂಗ್ ಹಾಗು ಜಾಹೀರಾತಿಗಾಗಿ ತಂಡದ ತಂಡದ ಆಟಗಾರರಾದ ಹರಭಜನ್ ಸಿಂಗ್,ಕೇದಾರ್ ಜಾಧವ್, ಜೊತೆಗೂಡಿ ಹೆಜ್ಜೆ ಹಾಕಿದ್ದಾರೆ. ಆದ್ರೆ ಕ್ಯಾಪ್ಟನ್ ಧೋನಿ ಮಾತ್ರ, ಕುಂತಲ್ಲೆ ಚಪ್ಪಾಳೆ ತಟ್ಟುತ್ತಾ ಹುರಿದುಂಬಿಸಿದ್ರು.
ಅಭ್ಯಾಸ ಪಂದ್ಯದಲ್ಲಿ ಸುರೇಶ್ ರೈನಾ ಬೊಂಬಾಟ್ ಬ್ಯಾಟಿಂಗ್
ಸಿಎಸ್ಕೆ ಅಭ್ಯಾಸ ಪಂದ್ಯದಲ್ಲಿ ಪವರ್ ಹಿಟ್ಟರ್ ಸುರೇಶ್ ರೈನಾ, ಕೇವಲ 29 ಎಸೆತಗಳಲ್ಲಿ 6 ಸಿಕ್ಸರ್, 1 ಬೌಂಡರಿ ಮೂಲಕ 56 ರನ್ ಸಿಡಿಸಿದ್ರು. ಟೀಮ್ ಇಂಡಿಯಕ್ಕೆ ಕಮ್ಬ್ಯಾಕ್ ಮಾಡಲು ವಿಫಲರಾದ ಈ ಯುಪಿ ಬ್ಯಾಟ್ಸ್ಮನ್ ಐಪಿಎಲ್ನಲ್ಲಾದ್ರು ಒಳ್ಳೆಯ ಪರ್ಫಾಮನ್ಸ್ ಕೊಟ್ಟು ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ. ಇನ್ನು ಬಾಲ್ ಟ್ಯಾಂಪರಿಂಗ್ ಮಾಡಿ ಸದ್ಯ ಆಸ್ಟ್ರೇಲಿಯಾ ತಂಡದಿಂದ ನಿಷೇಧಗೊಂಡಿರುವ ವಾರ್ನರ್, ಕಳೆದ ಬಾರಿ ಐಪಿಎಲ್ನಿಂದಲೂ ದೂರ ಉಳಿದಿದ್ರು. ಆದ್ರೆ ಈ ಬಾರಿ ಸನ್ರೈಸರ್ಸ್ ತಂಡ ಸೇರಿರುವ ವಾರ್ನರ್, ಪ್ರಾಕ್ಟೀಸ್ ಮ್ಯಾಚ್ನಲ್ಲಿ ಅಬ್ಬರಿಸಿದ್ದಾರೆ. 43 ಎಸೆತಗಳಲ್ಲಿ 65 ರನ್ ಬಾರಿಸಿ ಟೂರ್ನಿಯಲ್ಲೂ ಮಿಂಚುವ ಸೂಚನೆ ನೀಡಿದ್ದಾರೆ.
ತವರಿನಲ್ಲಿ ಮೊದಲ ಪಂದ್ಯ ಆಡುತ್ತಿದೆ ಚೆನ್ನೈ ತಂಡ
ಕಳೆದ ಬಾರಿ ಚಾಂಪಿಯನ್ನಾಗಿ ಮೆರೆದಾಡಿದ್ದ ಚೆನ್ನೈ ತಂಡ ಈ ಬಾರಿಯ ಸೀಸನ್ನ ಉದ್ಘಾಟನಾ ಪಂದ್ಯದಲ್ಲಿ ತವರನಲ್ಲಿ ಆರ್ಸಿಬಿ ಎದುರು ಆಡುತ್ತಿದೆ. ಮೊದಲ ಪಂದ್ಯದಲ್ಲೆ ಧೋನಿ ಪಡೆ ಭಾರೀ ಸವಾಲನ್ನ ಎದುರಿಸುತ್ತಿದ್ದು ತವರಿನ ಅಭಿಮಾನಗಳ ಎದುರು ಗೆದ್ದು ಶುಭಾರಂಭ ಮಾಡಲು ಸಜ್ಜಾಗಿದೆ.
ಒಟ್ಟಾರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯೂ ಚಾಂಪಿಯನ್ನಾಗಲು ಪಣ ತೊಟ್ಟಿದ್ದು ಟೂರ್ನಿಗೂ ಆರಂಭಕ್ಕೂ ಮುನ್ನವೇ ಭಾರೀ ಸೌಂಡ್ ಮಾಡಿದೆ.