![India-Train-Derails](http://kannada.vartamitra.com/wp-content/uploads/2019/03/India-Train-Derails-508x381.jpg)
ನವದೆಹಲಿ, ಮಾ.20- ದೆಹಲಿ-ಅಂಬಾಲ ನಡುವೆ ಸಂಚರಿಸುವ ಹಿಮಾಲಯನ್ ಕ್ವೀನ್ ರೈಲು ಇಂದು ಬೆಳಗ್ಗೆ ಹರಿಯಾಣದ ಪಾಣಿಪಟ್ ಜಿಲ್ಲೆಯ ಕೋಟ್ವಾಲ್ ಹಿಜಾರಿ ರೈಲ್ವೆ ನಿಲ್ದಾಣದ ಸಮೀಪ ಹಳಿ ತಪ್ಪಿದೆ.
ಬೆಳಗ್ಗೆ 6.49ರಲ್ಲಿ ಈ ಘಟನೆ ಸಂಭವಿಸಿದ್ದು , ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಉತ್ತರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ಬೋಗಿಗಳು ಹಳಿಯಿಂದ ಹೊರಗೆ ಬಂದಿದ್ದರೂ ನಂತರ 9 ಗಂಟೆ ವೇಳೆಗೆ ಸರಿಪಡಿಸಿ ರೈಲು ಸಂಚಾರವನ್ನು ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು , ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.