ನವದೆಹಲಿ: ದೇಶದ ಮೊದಲ ಲೋಕಪಾಲರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಪಿನಾಕಿ ಚಂದ್ರ ಘೋಷ್ ಅವರನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ನೇಮಕ ಮಾಡಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೋಕಪಾಲರ ನೇಮಕ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದೇ ವೇಳೆ ಸಶಸ್ತ್ರ ಸೀಮಾ ಬಲ್ (ಎಸ್ಎಸ್ ಬಿ) ನ ಮಾಜಿ ಮುಖ್ಯಸ್ಥರಾದ ಅರ್ಚನಾ ರಾಮಸಮುದ್ರಂ, ಮಹಾರಾಷ್ಟ್ರದ ಮಾಜಿ ಮುಖ್ಯ ಕಾರ್ಯದರ್ಶಿಯಾದ ದಿನೇಶ್ ಕುಮಾರ್ ಜೈನ್, ಮಹೇಂದ್ರ ಸಿಂಗ್ ಹಾಗೂ ಇಂದ್ರ ಜೀತ್ ಪ್ರಸಾದ್ ಗೌತಮ್ ಅವರುಗಳನ್ನು ಲೋಕಪಾಲಕ್ಕೆ ನ್ಯಾಯಾಂಗದಿಂದ ಹೊರತಾದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಇನ್ನು ಲೋಕಪಾಲದಲ್ಲಿನ ನ್ಯಾಯಾಂಗಕ್ಕೆ ಸಂಬಂಧಿಸಿದ ಸದಸ್ಯರ ಹುದ್ದೆಗೆ ನ್ಯಾ. ದಿಲೀಪ್ ಬಿ ಬೋಸ್ಲೆ, ನ್ಯಾ.ಪ್ರದೀಪ್ ಕುಮಾರ್ ಮೊಹಂತಿ, ನ್ಯಾ.ಅಭಿಲಾಶಾ ಕುಮಾರಿ, ನ್ಯಾ. ಅಜಯ್ ಕುಮಾರ್ ತ್ರಿಪಾಟಿ ಅವರನ್ನು ನೇಮಕ ಮಾಡಲಾಗಿದೆ.
ಈ ಎಲ್ಲಾ ಹೆಸರುಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿತ್ತು. ಮಾ.19 ರಂದು ರಾಷ್ಟ್ರಪತಿ ಕೋವಿಂದ್ ಶಿಫಾರಸ್ಸನ್ನು ಅಂಗೀಕರಿಸಿ ನೇಮಕ ಆದೇಶಕ್ಕೆ ಸಹಿ ಹಾಕಿದ್ದಾರೆ.
former sc judge pc ghose appointed indias first lokpal