
ಬೆಂಗಳೂರು, ಮಾ.19-ಮಂಡ್ಯ ಜನರ ಸೇವೆ ಮಾಡುವ ಅವಕಾಶ ನಿಮಗೆ ಸಿಗಲಿದೆ ಎಂದು ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಟ್ವೀಟ್ ಮೂಲಕ ನಟ ಕಿಚ್ಚ ಸುದೀಪ್ ಶುಭ ಕೋರಿದ್ದಾರೆ.
ಜನ ನಿಮ್ಮನ್ನು ಬೆಂಬಲಿಸಲಿದ್ದಾರೆ. ಮಂಡ್ಯ ಜನರ ಸೇವೆ ಮಾಡುವ ಅವಕಾಶ ನಿಮಗೆ ಸಿಗಲಿದೆ ಎಂದು ಹಾರೈಸಿದ್ದಾರೆ. ಇದಕ್ಕೆ ಟ್ವೀಟ್ನಲ್ಲೇ ಪ್ರತಿಕ್ರಿಯಿಸಿರುವ ಸುಮಲತಾ 10 ವರ್ಷದಿಂದ ನಮ್ಮ ಮನೆಯ ಸದಸ್ಯರು ನೀವು. ನಿಮ್ಮ ಹಾರೈಕೆಯಿಂದ ಮುಂದಿನ ಸವಾಲನ್ನು ಎದುರಿಸುವ ಧೈರ್ಯ ತಂದಿದೆ ಎಂದು ಹೇಳಿದ್ದಾರೆ.