
ಲಂಡನ್: ಪಿಎನ್ ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡು ವಿದೇಶಕ್ಕೆ ಪರಾರಿಯಾಗಿರುವ ವಜ್ರೋದ್ಯಮಿ ನೀರವ್ ಮೋದಿ ಲಂಡನ್ ಬೀದಿಗಳಲ್ಲಿ ಭಾರಿ ಮುಜುಗರ ಕ್ಕೀಡಾಗಿದ್ದಾರೆ.
ಇತ್ತೀಚೆಗಷ್ಟೆ ಅಂತಾರಾಷ್ಟ್ರೀಯ ಮಾಧ್ಯಮದವರ ಪ್ರಶ್ನೆ ಎದುರಿಸಲಾಗದೆ ನೋ ಕಮೆಂಟ್ಸ್ ಎಂದಷ್ಟೇ ಹೇಳಿದ್ದ ನೀರವ್ ಮೋದಿ, ಭಾರತದ ರಾಷ್ಟ್ರೀಯ ಮಾಧ್ಯಮದ ಪ್ರತಿನಿಧಿಯೊಬ್ಬರಿಗೆ ಲಂಡನ್ ಬೀದಿಯಲ್ಲಿ ಸಿಕ್ಕಿದ್ದು, ಅವರ ಪ್ರಶ್ನೆ ತಡೆಯಲಾರದೆ ಓಡಿಹೋದ ಪ್ರಸಂಗ ನಡೆದಿದೆ.
ವೆಸ್ಟ್ಮಿನಿಸ್ಟರ್ ಕೋರ್ಟ್ನಲ್ಲಿ ಬಂಧನ ವಾರೆಂಟ್ ಕೂಡ ಎದುರಿಸುತ್ತಿರುವ ನೀರವ್ ಮೋದಿ, ಈ ಸಾರಿಯೂ ಕೂಡ ತಮ್ಮ ನೋ ಕಮೆಂಟ್ಸ್ ಉತ್ತರವನ್ನು ಮುಂದುವರೆಸಿದ್ದಾರೆ.
ನೀವು ಭಾರತಕ್ಕೆ ವಾಪಸ್ ಹೋಗುತ್ತೀರಾ ಎಂದು ಕೇಳಿದ್ದಕ್ಕೆ ನೋ ಕಮೆಂಟ್ಸ್ ಎಂದ ನೀರವ್ ಮೋದಿ, ನಿಮ್ಮ ವಿರುದ್ಧ ಅರೆಸ್ಟ್ ವಾರೆಂಟ್ ದಾಖಲಾಗಿದೆಯಲ್ಲಾ ಎಂದು ಕೇಳಿದ್ದಕ್ಕೆ ರಸ್ತೆ ಬಿಟ್ಟು ಇನ್ನೊಂದು ಬದಿಗೆ ಓಡಿಹೋದರು.
ಹೋಟೆಲ್ಗೆ ಹೋದ ಅವರನ್ನು ಬಿಡದೆ ತಮ್ಮ ಪ್ರಶ್ನೆಗಳನ್ನು ಮುಂದುವರಿಸಿದ ಪತ್ರಕರ್ತ ಈಗ ಅರೆಸ್ ವಾರೆಂಟ್ ಬಂದಿದೆ, ನೀವು ಭಾರತಕ್ಕೆ ಹೋಗುತ್ತೀರಾ ಅಥವಾ ಬೇರೆ ಎಲ್ಲಿಗಾದರೂ ಹೋಗುವ ಪ್ಲಾನ್ ಇದೆಯಾ ಎಂದು ಕೇಳಿದಾಗ ಅದಕ್ಕೂ ಕೂಡ ನೋ ಕಮೆಂಟ್ಸ್ ಎಂದಷ್ಟೇ ಅವರು ಉತ್ತರಿಸಿದರು.
nirav modi escaped from media questions in london