ಮಾಜಿ ಸಚಿವ ಬಿ.ಶಿವರಾಮ್‍ರವರನ್ನು ಭೇಟಿ ಮಾಡಿದ ಸಚಿವ ರೇವಣ್ಣ

ಹಾಸನ, ಮಾ.19- ರಾಜ್ಯದಲ್ಲಿ ಕೋಮುವಾದಿ ಪಕ್ಷವನ್ನು ದೂರವಿಡುವ ನಿಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಪರಸ್ಪರ ಗೆಲುವಿಗೆ ಶ್ರಮಿಸಬೇಕೆಂದು ಸಚಿವ ಎಚ್.ಡಿ.ರೇವಣ್ಣ ಇಂದಿಲ್ಲಿ ತಿಳಿಸಿದರು.

ಮಾಜಿ ಸಚಿವ ಬಿ.ಶಿವರಾಮ್ ಅವರ ಮನೆಗೆ ಪುತ್ರ ಪ್ರಜ್ವಲ್‍ನೊಂದಿಗೆ ಭೇಟಿ ನೀಡಿದ್ದು, ರೇವಣ್ಣ ಅವರು ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್‍ಗೆ ರಾಜಕೀಯ ಬೆಂಬಲ ನೀಡುವಂತೆ ಕೋರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್-ಜೆಡಿಎಸ್ 8:20ರ ಅನುಪಾತದಲ್ಲಿ ಲೋಕಸಭಾ ಸ್ಥಾನ ಆಯ್ಕೆ ಮಾಡಿಕೊಂಡು ಕಣಕ್ಕಿಳಿದಿದೆ. ಪರಸ್ಪರ ವಿಶ್ವಾಸದಿಂದ ಮತ ಚಲಾಯಿಸಿ ಬೆಂಬಲ ಸೂಚಿಸಬೇಕು ಎಂದರು.

ಇದಕ್ಕೆ ದನಿ ಗೂಡಿಸಿದ ಬಿ.ಶಿವರಾಮ್ ಜಿಲ್ಲೆಯ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಮನಸ್ತಾಪ ದೂರವಾಗಬೇಕು. ನಾಳೆ ಜಿಲ್ಲೆಯ ಅಭಿವೃದ್ಧಿ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ.

ಎಲ್ಲಾ ಕಾರ್ಯಕರ್ತರೊಂದಿಗೆ ಚರ್ಚಿಸಿ ಜೆಡಿಎಸ್‍ಗೆ ಬೆಂಬಲ ನೀಡಲಾಗುವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ