ಐಪಿಎಲ್ ನಲ್ಲಿ ಮಿಂಚಲಿದ್ದಾರೆ ಈ ಫಾರಿನ್ ಪ್ಲೇಯರ್ಸ್

12ನೇ ಸೀಸನ್ ಐಪಿಎಲ್ ಇನ್ನೇನು ಆರಂಭಗೊಳ್ಳಲಿದೆ. 3 ದಿನಗಳಲ್ಲಿ ಆರಂಭವಾಗಲಿರುವ ಕಲರ್ಫುಲ್ ಹಬ್ಬ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ. ಈ ಬಾರಿಯ ಬಿಲಿಯನ್ ಡಾಲರ್ ಟೂರ್ನಿ ಸಾಕಷ್ಟು ಹೊಸ ಬದಲಾವಣೆ, ಹೊಸ ಹುರುಪಿನೊಂದಿಗೆ ನಡೆಯಲಿದೆ. ಈ ಬಾರಿಯ ಐಪಿಎಲ್ನಲ್ಲಿ ಐದು ವಿದೇಶಿ ಆಟಗಾರರು ಈ ಬಾರಿ ಡೆಬ್ಯು ಮಾಡಲು ಕಾತರರಾಗಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇಂಪ್ರೆಸ್ ಮಾಡಿರುವ ಈ ಬ್ಯಾಟ್ಸ್ಮನ್ಗಳು ಐಪಿಎಲ್ನ್ಲೂ ಕಮಾಲ್ ಮಾಡಲು ಬಂದಿದ್ದಾರೆ. ಹಾಗಾದ್ರೆ ಬನ್ನಿ ಈ ಐದು ಆಟಗಾರರು ಯಾರು ಅನ್ನೋದನ್ನ ನೋಡೋಣ.

ರಾಯಲ್ಸ್ಗೆ ಸಿಕ್ಕಿದ್ದಾನೆ ಮ್ಯಾಚ್ ಮಾಡೋ ಟರ್ನರ್
ಮೊನ್ನೆ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಏಕದಿನ ಸರಣಿ ಗೆಲ್ಲಲ್ಲು ಕಾರಣರಾಗಿದ್ದು ಆಸಿಸ್ ಆಲ್ರೌಂಡರ್ ಆಶ್ಟನ್ ಟರ್ನರ್. ಮೊಹಾಲಿ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಶೈನ್ ಆಗಿದ್ರು.43 ಎಸೆತಗಳಲ್ಲಿ 84 ರನ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ರು.

ಬಿಗ್ ಬ್ಯಾಷ್ನಲ್ಲಿ ಆಸ್ಟನ್ ಟರ್ನರ್ ಸಾಧನೆ
ಪಂದ್ಯಗಳು 74
ಇನ್ನಿಂಗ್ಸ್ 64
ರನ್ಗಳು 1,132
ಹೈಯೆಸ್ಟ್ ಸ್ಕೋರ್ 73
ವಿಕೆಟ್ 17
ಬಿಗ್ಬ್ಯಾಷ್ನಲ್ಲಿ 74 ಪಂದ್ಯಗಳ ಪೈಕಿ 64 ಇನ್ನಿಂಗ್ಸ್ಗಳನ್ನಾಡಿರುವ ಟರ್ನರ್ 138.72 ಸ್ಟ್ರೈಕ್ ರೇಟ್ನೊಂದಿಗೆ 1132 ರನ್ ಸಿಡಿಸಿದ್ದಾರೆ. ಇನ್ನೂ ತಂಡಕ್ಕೆ ಅರೆಕಾಎಲಿಕ ಬೌಲರ್ ಆಗಿಯೂ ಅರ್ನರ್ ತಂಡಕ್ಕೆ ನೆರವಾಗಬಲ್ಲರು. ಒಟ್ಟು 24 ಇನ್ನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಟರ್ನರ್ 17 ವಿಕೆಟ್ ಪಡೆದಿದ್ದಾರೆ.

ಸನ್ ರೈಸರ್ಸ್ ಪರ ಕಣಕ್ಕಿಳಿಯಲಿದ್ದಾರೆ ಬೇರ್ ಸ್ಟೋ
ವಿಕೆಟ್ ಕೀಪರ್ ಕಮ್ ಸ್ಫೋಟಕ ಬ್ಯಾಟ್ಸ್ಮನ್ ಬೇರ್ ಸ್ಟೋ ಇಂಗ್ಲೆಂಡ್ ತಂಡದ ಸ್ಟಾರ್ ಪ್ಲೇಯರ್ ಆಗಿದ್ದಾರೆ. ಸ್ಪೋಟಕ ಬ್ಯಾಟಿಂಗ್ನಿಂದಲೇ ಜಾನಿ ಬೇರ್ಸ್ಟೊ ತಂಡದ ಪರ ಏಕಾಂಗಿ ಹೋರಾಟ ಮಾಡಿ ಮ್ಯಾಚ್ ವಿನ್ನರ್ ಎನಿಸಿದ್ದಾರೆ.

ಕಳೆದ 2-3 ವರ್ಷಗಳಿಂದ ಐಪಿಎಲ್ನಲ್ಲಿ ಆಡಲು ಪ್ರಯತ್ನಿಸುದ್ರು ಬಿಡ್ ಆಗಿರಲಿಲ್ಲ. ಆದ್ರೆ, ಈ ವರ್ಷದ ಹರಾಜಿನಲ್ಲಿ ಸನ್ರೈಸರ್ಸ್ 2.2 ಕೋಟಿ ಬೆಲೆಗೆ ಪಾಲಾಗಿದ್ದಾರೆ. ಹೈದ್ರಾಬಾದ್ ತಂಡದ ಆರಂಭಿಕರಾಗಿ ಜಾನಿ ಬೇರ್ ಸ್ಟೊ – ಡೇವಿಡ್ ವಾರ್ನರ್ ಕಣಕ್ಕಿಳಿಯೋದು ಪಕ್ಕಾ. ಅಲ್ದೇ ಇದೇ ಮೊದಲ ಬಾರಿಗೆ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಪಾದರ್ಪಣೆ ಮಾಡ್ತಿರುವ ಜಾನಿ ಬೇರ್ ಸ್ಟೋ ಕ್ರಿಕೆಟ್ ಅಭಿಮಾನಿಗಳನ್ನ ಇಟಿಣeಡಿಣಚಿiಟಿ ಮಾಡಲು ಉತ್ಸುಕರಾಗಿದ್ದಾರೆ.

ಹೊಡಿಬಡಿ ಆಟಕ್ಕೆ ಶಿಮ್ರಾನ್ ಹೇಟ್ಮಾರ್ ಸೈ
ಕಳೆದ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಟಿಂಗ್ ಸೆನ್ಸೇಷನ್ ಆಗಿದ್ದೆ ಈ ಕೆರಿಬಿಯನ್ ದೈತ್ಯ ಶಿಮ್ರಾನ್ ಹೇಟ್ಮಾರ್. ಮೊಲದ ಏಕದಿನ ಪಂದ್ಯದಲ್ಲೇ ಭಾರತದ ಬೌಲರ್ಗಳನ್ನು ಕಾಡಿದ್ದು 22 ವರ್ಷದ ಈ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮನ್ ಹೇಟ್ಮಾರ್. ಸದ್ಯ ಈ ದೈತ್ಯ ಹಾರ್ಡ್ ಹಿಟ್ಟರ್ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪಾಲಗಿಗಿದ್ದು IPಐಗೆ ಪಾದರ್ಪಣೆ ಮಾಡಲು ಸಿದ್ದರಾಗಿದ್ದಾರೆ. ಚುಟುಕು ಕ್ರಿಕೆಟ್ ಟೂರ್ನಿಗೆ ಈ ಕೆರಿಬಿಯನ್ ಆಟಗಾರ ಹೇಟ್ಮಾರ್ ಹೇಳಿ ಮಾಡಿಸಿದ ಆಟಗಾರ. ಆರ್ಸಿಬಿ ತಂಡಕ್ಕೆ ಮಧ್ಯಮ ಕ್ರಮಾಂಕದ ಅಗತ್ಯತೆ ಇದ್ದು ಶಿಮ್ರಾನ್ ಆ ಸ್ಥಾನ ತಂಬುವ ಎಲ್ಲಾ ತಾಕತ್ತು ಹೊಂದಿದ್ದಾರೆ.

ಇನ್ನೂ ಈ 22 ವರ್ಷದ ಯುವ ಬ್ಯಾಟ್ಸ್ಮನ್ ಕಳೆದ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾರೀ ಸದ್ದು ಮಾಡಿದ್ರು. ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿದ ಶಿಮ್ರಾನ್ ಹಿಟ್ಮಾರ್ 148.15 ಸ್ಟ್ರೈಕ್ ರೇಟ್ನೊಂದಿಗೆ 440 ರನ್ ಬಾರಿಸಿದ್ರು. ಜೊತೆಗೆ ಕೇವಲ 47 ಎಸೆತಗಳಲ್ಲೇ ಶತಕ ಸಿಡಿಸಿದ್ದರು. ನಾಯಕ ವಿರಾಟ್ ಕೊಹ್ಲಿ, ಡಿವಿಲಿಯರ್ಸ್ಗೆ ಜೊತೆಗೆ ಹಿಟ್ಮಾರ್ ಸಿಡಿಸಿದ್ದೆ ಆದ್ರೆ, ಎದುರಾಳಿಗಳು ಉಡೀಸ್ ಆಗೋದು ಖಂಡಿತ.

ಪಂಜಾಬ್ ತಂಡದಿಂದ ಮತ್ತೊಬ್ಬ ಗೇಲ್ ಪಾದರ್ಪಣೆ!
ಹೌದು. ಕೆರಿಬಿಯನ್ ತಂಡದ ವಿಕೆಟ್ ಕೀಪರ್ ಹಾಗೂ ಲೆಫ್ಟ್ಹ್ಯಾಂಡ್ ಬ್ಯಾಟ್ಸ್ಮನ್ ನಿಕೋಲಸ್ ಪುರನ್ ಕಿಂಗ್ಸ್ ಇಲೆವೆನ್ ಪರ ಕಣಕ್ಕಿಳಿಯುತ್ತಿದ್ದಾರೆ. ಕೆರೆಬಿಯನ್ ಕಿಂಗ್ ಕ್ರಿಸ್ ಗೇಲ್ನಂತೆ ಅಬ್ಬರಿಸೋ ನಿಕೊಲೊಸ್ ಟಿ20 ಫಾರ್ಮೆಟ್ಗೆ ಹೇಳಿಮಾಡಿಸಿದ ಬ್ಯಾಟ್ಸ್ಮನ್ ಇದ್ದು ಗೇಲ್ರಂತೆಯೇ ಬ್ಯಾಟಿಂಗ್ ನಡೆಸಬಲ್ಲ ಸಾಮರ್ಥ್ಯ ಇದೆ.

ನಿಕೋಲಸ್ ವಿಕೆಟ್ ಕೀಪರ್ ಆಗಿರುವುದು ಕಿಂಗ್ಸ್ ಇಲೆವೆನ್ ತಂಡಕ್ಕೆ ಫ್ಲಸ್ ಪಾಯಿಂಟ್. ಕಳೆದ ಭಾರತ – ವಿಂಡೀಸ್ ನಡುವಿನ ಖಿ20 ಸರಣಿಯಲ್ಲಿ ಟೀಂ ಇಂಡಿಯಾ ವಿರುದ್ಧ 25 ಎಸೆತಗಳಲ್ಲಿ 54 ರನ್ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ರು. ಕೆರಿಬಿಯನ್ ಲೀಗ್ನಲ್ಲಿ ಆಡಿದ ಅನುಭವ ನಿಕೋಲಸ್ಗೆ ಇದೆ.

ಪಂಜಾಬ್ಗೆ ಆಲ್ರೌಂಡರ್ ಸ್ಯಾಮ್ ಕರನ್
ಇಂಗ್ಲೆಂಡ್ನ ಸ್ಯಾಮ್ ಕರನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. 22 ವರ್ಷದ ಆಲ್ರೌಂಡರ್ ಆಗಿರುವ ಸ್ಯಾಮ್ ಕರನ್ ರಾನ್ರನ್ನ ಇಲೆವೆನ್ ಪಂಜಾಬ್ ಫ್ರಾಂಚೈಸಿ 7.2 ಕೋಟಿಗೆ ಖರೀಸಿದಿದೆ. ಸೀಮ್-ಬೌಲಿಂಗ್ ಆಲ್-ರೌಂಡರ್ ಆಗಿರುವುದು ಕಿಂಗ್ಸ್ ಇಲೆವೆನ್ ಪಂಜಾಬ್ಗೆ ಬೋನಸ್. ಬ್ಯಾಟಿಂಗ್, ಬೌಲಿಂಗ್ ಹಾಗೂ ಪಂದ್ಯವನ್ನು ಗೆಲ್ಲಿಸಲು ಸಹ ಸ್ಯಾಮ್ ಕರನ್ ಸೈ. ಸ್ಯಾಮ್ ಪಾದರ್ಪಣೆ ಬಳಿಕ ಇಂಗ್ಲೆಂಡ್ ತಂಡ ಸತತ 7 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ.

ಇನ್ನೂ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಭಾರತ ಬ್ಯಾಟ್ಸ್ಮನ್ಗಳಿಗೂ ಕಂಟಕವಾಗಿ ಕಾಡಿದ್ದರು. ಆದ್ರೆ, ಇನ್ನೂ ಚುಟುಕು ಕ್ರಿಕೆಟ್ ಆಡದ ಸ್ಯಾಮ್ ಕುರಾನ್ಗೆ ಖಂಡಿತವಾಗಿಯೂ ಐಪಿಎಲ್ ಟೂರ್ನಿ ಒಂದು ದೊಡ್ಡ ಸವಾಲಾಗಿದೆ.

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್ಗಳಾಗಿ ಗುರುತಿಸಿಕೊಂಡ ಈ ಐವರು ವಿದೇಶಿ ಆಟಗಾರರು ಐಪಿಎಲ್ಗೆ  ಪಾದರ್ಪಣೆ ಮಾಡ್ತಿದ್ದಾರೆ. ಮ್ಯಾಚ್ ವಿನ್ನರ್ಗಳಾಗಿ ಗುರುತಿಸಿಕೊಂಡಿದ್ದ ಇವ್ರು ಐಪಿಎಲ್ನಲ್ಲಿ ಹೇಗೆ ಪ್ರದರ್ಶನ ನೀಡ್ತಾರೆ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ