ಶೃತಿ ಲಯ ಸಂಗೀತ ರಸ ಸಂಜೆ ಇದೇ ಶನಿವಾರ

ಹಿನ್ನಲೆ ಗಾಯಕ ಶ್ರೀನಾಥ್ ಭಾರಧ್ವಾಜ್ ರವರ
ಕಲ್ಚರಲ್ ಅಕಾಡೆಮಿ ವತಿಯಿಂದ
“ಶುಭ ಮಂಗಳಾ ಸುಮುಹೂರ್ತವೇ ಶುಭವೇಳೆ” ಎಂಬ
ಖ್ಯಾತ ಚಲನಚಿತ್ರ ನಟ ಪ್ರಣಯರಾಜ ಡಾ.ಶ್ರೀನಾಥ್ ರವರ ಉಪಸ್ಥಿತಿಯಲ್ಲಿ ವಿಶೇಷ ಜನಪ್ರಿಯ ಗೀತೆಗಳ ರಸಸಂಜೆ ಕಾರ್ಯಕ್ರಮವನ್ನು ದಿನಾಂಕ:23-03-2019ರ ಶನಿವಾರ ಸಂಜೆ 5:00 ಗಂಟೆಗೆ ಮಲ್ಲೇಶ್ವರದ 15ನೇ ಅಡ್ಡ ರಸ್ತೆಯ ಶುಕ್ರ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಹಿರಿಯ ನಿರ್ದೇಶಕ
ಶ್ರೀಯುತ ಭಾರ್ಗವ,
ಡಾ.ರಾಧಾಕೃಷ್ಣ ರಾಜು
(ಅಧ್ಯಕ್ಷರು ತೆಲಗು ವಿಜ್ಞಾನ ಸಮಿತಿ),
ಶ್ರೀ ಬಿ.ಕೆ.ಶಿವರಾಮ್
(ನಿವೃತ್ತ ಪೊಲೀಸ್ ಅಧಿಕಾರಿ),
ಶ್ರೀ ವೆಂಕಟೇಶ್ ಮೂರ್ತಿ ಶಿರೂರು
(ಶಿರೂರು ಪ್ರತಿಷ್ಟಾನ),
ಶ್ರೀ ವಿನಾಯಕ ಭಟ್,
(ಸಮೂಹ ಸಂಪಾದಕರು ಹೊಸ ದಿಗಂತ),
ಶ್ರೀಮತಿ ಜ್ಯೋತಿ ರವಿಪ್ರಕಾಶ್
(ಅಧ್ಯಕ್ಷರು, ಗಾನಪ್ರಿಯ ಕಲ್ಚರಲ್ ಅಕಾಡೆಮಿ),
ಕಾರ್ಯಕ್ರಮದ ಆಯೋಜಕರು
ಶ್ರೀಮತಿ ಎನ್.ಶೈಲಜಾ, ಬೆಂಗಳೂರು
(ಕಾರ್ಯದರ್ಶಿ, ಶೃತಿ ಲಯ ಸಂಗೀತ ಕಲ್ಚರಲ್ ಅಕಾಡೆಮಿ) ಅವರು ಭಾಗವಹಿಸಲಿದ್ದಾರೆ.

ಎಲ್ಲರಿಗೂ ಪ್ರವೇಶ ಉಚಿತವಾಗಿದ್ದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ