ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ನನ್ನ ಧೋನಿ ಜೊತೆ ಹೋಲಿಕೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಮೊನ್ನೆ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಟೀಂ ಇಂಡಿಯಾ ಏಕದಿನ ಸರಣಿಯನ್ನ ಕೈಚೆಲ್ಲಿಕೊಂಡಿತ್ತು. ಮೊಹಾಲಿಯಲ್ಲಿ ನಡೆದ ನಾಲ್ಕನೆ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ಎರಡು ಸ್ಟಂಪ್ ಔಟ್ಗಳನ್ನ ಮಿಸ್ ಮಾಡಿದ್ದು ಸರಣಿ ಸೋಲಿಗೆ ಕಾರಣವಾಗಿತ್ತು. ಆಗ ಮೈದಾನದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳು ಧೋನಿ…ಧೋನಿ ಎಂದು ರಿಷಭ್ಗೆ ಕೇಳುವ ಹಾಗೆ ಕಿರುಚಾಡಿದ್ದರು. ರಿಷಬ್ ಕಿಪೀಂಗ್ ಎಲ್ಲೆಡೆಯಿಂದ ಭಾರೀ ಟೀಕೆಗಳು ಕೇಳಿ ಬಂದಿದ್ದವು.
ಇದೀಗ ರಿಷಬ್ ಪ್ರತಿಕ್ರಿಯಿಸಿದ್ದು, ನಾನು ಹೋಲಿಕೆಗಳ ಬಗ್ಗೆ ಯೋಚಿಸಲ್ಲ, ನಾನೊಬ್ಬ ಆಟಗಾರನಾಗಿ ಧೋನಿಯಿಂದ ಕಲಿಯಬೇಕು. ಅವರೊಬ್ಬ ಗೇಮ್ನ ಲೆಜೆಂಡ್. ಅಭಿಮಾನಿಗಳು ಧೋನಿಯೊಂದಿಗೆ ಹೋಲಿದೋದು ಬೇಡ ಇದನ್ನ ನನ್ನಿಂದ ತೆಡಯೋದು ಸಾಧ್ಯವಿಲ್ಲ. ಆನ್ಫೀಲ್ಡ್ ಮತ್ತು ಆಫ್ ದಿ ಫೀಲ್ಡ್ನಲ್ಲಿ ನಾನು ಧೋನಿಗೆ ಹತ್ತಿರವಾಗಿದ್ದು ನನ್ನ ಆಟವನ್ನ ಹೇಗೆ ಉತ್ತಮ ಪಡಿಸಿಕೊಳ್ಳಬೇಕೆನ್ನುವುದರ ಕುರಿತು ಚರ್ಚಿಸುತ್ತೇನೆ ಎಂದು ರಿಷಬ್ ಪಂತ್ ಹೇಳಿದ್ದಾರೆ.