ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದ ಪುಲ್ವಾಮ ಉಗ್ರ ದಾಳಿಯ ಹಿಂದೆ ಪಾಕಿಸ್ತಾನ ಸರ್ಕಾರದ ಕೈವಾಡವಿದೆ ಎಂದು ಪಾಕ್ ಸಂಸದರೊಬ್ಬರು ಹೇಳಿದ್ದಾರೆ.
ಇಸ್ಲಾಮಾಬಾದ್ ರಣತಂತ್ರ ಅಧ್ಯಯನ ಸಂಸ್ಥೆ(ಐಎಸ್‌ಎಸ್‌ಐ) ಏರ್ಪಡಿಸಿದ ಪಾಕಿಸ್ತಾನ-ಚೀನಾ ಸಂಸ್ಥೆ ಹಾಗೂ ವಿದೇಶಾಂಗ ವ್ಯವಹಾರಗಳ ಸಮಿತಿ ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನ ಮುಸ್ಲಿಂ ಲೀಗ್ ಪಕ್ಷದ ಸದಸ್ಯ, ಸಂಸದ ಮುಷಾಹಿದ್ ಹುಸೇನ್ ಸಯದ್ , ಪುಲ್ವಾಮಾ ದಾಳಿ ಬಳಿಕ ವಾಯುದಾಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕಚ್ಚಾಟದ ಸಂದರ್ಭದಲ್ಲಿ ಇಡೀ ದೇಶವೇ ಒಂದಾಗಿತ್ತು. ಇದರಿಂದಾಗಿಯೇ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಗೆಲುವು ಸಿಕ್ಕಿತು ಎಂದು ತಿಳಿಸಿದ್ದಾರೆ.
ಅಲ್ಲದೇ ನಾವು ಸರಿಯಾದ ಸಂದರ್ಭದಲ್ಲಿ ಸರಿಯಾದ ನಿರ್ಧಾರ ಕೈಗೊಂಡೆವು. ಇದರಿಂದಾಗಿಯೇ ಅಂತಾರಾಷ್ಟ್ರೀಯ ಮತ್ತು ದೇಶದ ಜನತೆ ನಮ್ಮ ಪರ ಧ್ವನಿಯೆತ್ತುವಂತಾಯಿತು. 1998ರಲ್ಲಿ ಪರಮಾಣು ಪರೀಕ್ಷೆ ನಡೆಸಿದ 20 ವರ್ಷದ ಬಳಿಕ ಪುಲ್ವಾಮಾ ದಾಳಿಯು ಪಾಕಿಸ್ತಾನದ ಅತ್ಯುತ್ತಮ ನಡೆಯಾಗಿದೆ ಎಂದು ಸಂಸದ ಮುಷಾಹಿದ್ ಹುಸೇನ್ ಸಯದ್ ಹೇಳಿದ್ದಾರೆ.
Pulwama terror attack was Pakistan’s finest hour: Pakistani Senator Mushahid Hussain Sayed