ನ್ಯೂಜಿಲೆಂಡ್ ಮಸೀದಿಯಲ್ಲಿ ಗುಂಡಿನ ದಾಳಿ ಪ್ರಕರಣ: ಐವರು ಭಾರತೀಯರೂ ಸೇರಿ 50 ಜನರ ಸಾವು

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನಲ್ಲಿ ನಿನ್ನೆ ನಡೆದ ಬಂದೂಕುಧಾರಿಯ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 50ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರಲ್ಲಿ ಐದು ಮಂದಿ ಭಾರತೀಯರೂ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಸಾವನ್ನಪ್ಪಿದ ಭಾರತೀಯರನ್ನು ಮಹೇಬೂಬ್ ಖೋಖರ್, ರಮೀಜ್ ವೋರಾ, ಆಸಿಫ್ ವೋರಾ, ಅನ್ಸಿ ಅಲಿಬಾವಾ, ಮತ್ತು ಓಝೈರ್ ಕಾದಿರ್ ಎಂದು ಗುರುತಿಸಲಾಗಿದೆ. ಅಂತೆಯೇ ಸಾವನ್ನಪ್ಪಿದವರ ಭಾರತೀಯ ಶವಗಳನ್ನು ಅವರ ಕುಟುಂಬಸ್ಥರಿಗೆ ರವಾನಿಸಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಗುಂಡಿನ ದಾಳಿ ನಡೆಸಿದವನು ಆಸ್ಟ್ರೇಲಿಯ ಮೂಲದ ಬ್ರೆಂಟನ್ ಟ್ಯಾರಂಟ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ದಾಳಿ ನಡೆಸಿದ್ದು ಏಕೈಕ ಬಂದೂಕುಧಾರಿ ಎಂದು ತಿಳಿದುಬಂದಿದೆ ಎನ್ನಲಾಗಿದೆ.

ಮಸೀದಿಯಲ್ಲಿ ಪ್ರಾರ್ಥನೆಯಲ್ಲಿ ತೊಡಗಿದ್ದ ವೇಳೆ ಏಕಾಏಕಿ ಬಂದ ಬಂದೂಕುಧಾರಿ ಗುಂಡಿನ ಮಳೆಗರೆದಿದ್ದಾನೆ. ದಾಳಿಯಲ್ಲಿ 50 ಜನ ಮೃತಪಟ್ಟು 20ಕ್ಕೂ ಅಧಿಕ ಜನರಿಗೆ ಗಾಯಗಳಾಗಿದೆ. ದಾಳಿಕೋರ ತನ್ನ ಕೃತ್ಯವನ್ನು 17 ನಿಮಿಷ ತನ್ನ ಟ್ವಿಟರ್​ ಅಕೌಂಟ್​ ಮೂಲಕ ಲೈವ್​ ಸ್ಟ್ರೀಮ್​ ಮಾಡಿದ್ದಾನೆ.

ಘಟನೆಯ ನಂತರ ಭಾರತೀಯ ಮೂಲದ 9 ಜನ ನಾಪತ್ತೆಯಾಗಿರುವ ವಿಚಾರವನ್ನು ನ್ಯೂಜಿಲೆಂಡ್​ನಲ್ಲಿ ಭಾರತದ ರಾಯಭಾರಿಯಾಗಿರುವ ಸಂಜೀವ್ ಕೊಹ್ಲಿ ಟ್ವೀಟ್ ಮಾಡಿದ್ದರು.

5 Indians Among 50 Killed In New Zealand Mosque Shootings

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ