ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ’ಮೇ ಭಿ ಚೌಕಿದಾರ್’ ಎಂಬ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಈ ವಿಡಿಯೋ ಈಗ ಭಾರೀ ಪ್ರಶಂಸೆಗೆ ಪಾತ್ರವಾಗುತ್ತಿದೆ.
3.45 ನಿಮಿಷಗಳ ವಿಡಿಯೋದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಚೌಕಿದಾರನೇ ಎನ್ನುವುದನ್ನು ತೋರಿಸಲಾಗಿದೆ. ಪ್ರಧಾನಿ ಮೋದಿ ಭಾಷಣ, ವಿವಿಧ ಅಭಿವೃದ್ಧಿ ಕಾರ್ಯಗಳು ಸೇರಿಕೊಂಡಿದ್ದು, ಹಾಡಿನ ರೂಪದಲ್ಲಿ ಮೂಡಿ ಬಂದಿದೆ.
ನಿಮ್ಮ ಚೌಕಿದಾರ್ ಸದೃಢವಾಗಿ ನಿಂತಿದ್ದು, ರಾಷ್ಟಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ನಾನು ಒಬಂಟ್ಟಿಯಾಗಿಲ್ಲ. ಭಾರತದ ಪ್ರಗತಿಗೆ ಶ್ರಮಿಸುತ್ತಿರುವ ಪ್ರತಿಯೊಬ್ಬರೂ ಚೌಕಿದಾರರೇ. ಪ್ರತಿ ಭಾರತೀಯನು ಹೇಳುತ್ತಿದ್ದಾನೆ ಮೈನೆ ಭಿ ಚೌಕಿದಾರ್ ಎಂದು… ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪ್ರಧಾನಿ ಮೋದಿ ಈ ವಿಡಿಯೋ ಶೇರ್ ಮಾಡಿರುವುದು ಮಹತ್ವಪಡೆದುಕೊಂಡಿದೆ.
Main Bhi Chowkidar PM Modi tweets a video