ನಗರಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ಚೆಕ್ ಪೋಸ್ಟ್ ಆರಂಭ

ಮೈಸೂರು, ಮಾ.16- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ 12ಚೆಕ್ ಪೋಸ್ಟ್ಗಳನ್ನು ಪ್ರಾರಂಭಿಸಲಾಗಿದೆ.

ನಗರಕ್ಕೆ ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲಿಯೂ ಚೆಕ್ ಪೋಸ್ಟ್ಗಳನ್ನು ಆರಂಭಿಸಲಾಗಿದ್ದು ಸ್ಥಿರ ಕಣ್ಗಾವಲು ತಂಡವನ್ನು ನಿಯೋಚಿಸಲಾಗಿದೆ. 36ಅಧಿಕಾರಿಗಳೊಂದಿಗೆ ಎಎಸ್‍ಐ ಹಗೂ ಕಾನ್ ಸ್ಟೇಬಲ್‍ಗಳನ್ನು ಒಳಗೊಂಡ ಈ ತಂಡ ಚೆಕ್ ಪೋಸ್ಟ್ಗಳಲ್ಲಿ ದಿನದ 24ಗಂಟೆಯೂ 3ಪಾಳಿಗಳಲ್ಲಿ ಕಾರ್ಯನಿರ್ವಹಿಸಲಿದೆ.

ಮೈಸೂರು ನಗರ ಪ್ರವೇಶಿಸುವ ಪ್ರತಿಯೊಂದು ವಾಹನಗಳನ್ನು ಸಂಪೂರ್ಣವಾಗಿ ತಪಾಸಣೆ ನಡೆಸಲಾಗುತ್ತಿದೆ. ನಗದು ಇನ್ನಿತರ ವಸ್ತುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಕಂಡು ಬಂದರೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಡಿಸಿಪಿ ಮುತ್ತುರಾಜ್, ಚುನಾವಣಾ ಮಾದರಿ ನೀತಿಸಂಹಿತಿ ನಿರ್ವಹಣೆ ನೋಡಲ್ ಅಧಿಕಾರಿ ಹಾಗೂ ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್ ರಾತ್ರಿ ನಗರದ ಕೆಲ ಚೆಕ್‍ಪೋಸ್ಟ್‍ಗಳಿವೆ ಭೇಟಿ ನೀಡಿ ಸ್ಥಿರ ಕಣ್ಗಾವಲು ತಂಡ ಕಾರ್ಯವೈಖರಿ ಪರಿಶೀಲಿಸಿ ಕೆಲ ವಾಹನ ತಪಾಸಣೆ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ