
ಬೇಲೂರು, ಮಾ.16- ಪಟ್ಟಣದ ಯಗಚಿ ನದಿಗೆ ನಿರ್ಮಿಸಿರುವ ಸೇತುವೆ ಕೆಳಭಾಗದ ನದಿಯಲ್ಲಿ 35 ರಿಂದ 40 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಯಗಚಿ ನದಿಯಲ್ಲಿ ಕಂಡು ಬಂದಿರುವ ವ್ಯಕ್ತಿಯ ಮೃತದೇಹವು ನೀರಿನಲ್ಲಿ ಮುಖ ಕೆಳಗೆ ಮಾಡಿ ಕೊಂಡು ಬಿದ್ದಿರುವುದರಿಂದ ಅವರು ಯಾರು, ಎಲ್ಲಿಯವರು ಎಂಬುದು ತಿಳಿದು ಬಂದಿಲ್ಲ. ಮೃತರು ಕಳೆದ ಎರಡು ಅಥವಾ ಮೂರು ದಿನಗಳ ಹಿಂದೆ ನೀರಿನಲ್ಲಿ ಬಿದ್ದಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಮೃತದೇಹದ ಕೆಲ ಭಾಗವನ್ನು ಮೀನು ಅಥವಾ ಇತರೆ ಪ್ರಾಣಿ ಪಕ್ಷಿಗಳು ತಿಂದಿರುವುದರಿಂದ ದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬರುತ್ತಿದೆ.
ಸ್ಥಳಕ್ಕೆ ಪೆÇಲೀಸರು ಆಗಮಿಸಿ ಮೃತದೇಹವನ್ನು ಪರಿಶೀಲಿಸಿದ್ದು, ಬೇಲೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.