36ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡುತ್ತೇನೆ : ಶ್ರೀಶಾಂತ್

42ನೇ ವಯಸ್ಸಿನಲ್ಲಿ ಲಿಯಾಂಡರ್ ಪೇಸ್ ಆಡಿ ಗ್ರ್ಯಾನ್ ಸ್ಲಾಮ್‍ಗಳನ್ನ ಗೆಲ್ಲೊದಾದ್ರೆ ನಾನು 36ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡುತ್ತೇನೆ ಎಂದು ವೇಗಿ ಶ್ರೀಶಾಂತ್ ಹೇಳಿದ್ದರೆ.

2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್‍ಗೆ ಪ್ರಕರಣಧ ಪ್ರಮುಖ ಆರೋಪಿ ಶ್ರೀಶಾಂತ್‍ಗೆ ಬಿಸಿಸಿಐ ಆಜೀವ ನಿಷೇಧ ವಿಧಿಸಿತ್ತು. ಇದನ್ನ ಪ್ರಶ್ನಿಸಿ ಶ್ರೀಶಾಂತ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.


ಸುಪ್ರೀಂ ಕೋರ್ಟ್ ಶ್ರೀಶಾಂತ್ ಮೇಲಿನ ನಿಷೇಧವನ್ನ ರದ್ದುಗೊಳಿಸಿ ಇನ್ನು ಮೂರು ತಿಂಗಳೊಳಗೆ ಬೇರೆ ಶಿಕ್ಷೆ ನೀಡುವಂತೆ ಬಸಿಸಿಐಗೆ ಸೂಚಿಸಿದೆ.

ತೀರ್ಪಿನ ನಂತರ ಪ್ರತಿಕ್ರಿಯಿಸಿದ ಶ್ರೀಶಾಂತ್, 42ನೇ ವಯಸ್ಸಿನಲ್ಲಿ ಲಿಯಾಂಡರ್ ಪೇಸ್ ಆಡಿ ಗ್ರ್ಯಾನ್ ಸ್ಲಾಮ್‍ಗಳನ್ನ ಗೆಲ್ಲೊದಾದ್ರೆ ನಾನು 36ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡುತ್ತೇನೆ ಎಂದು ಹೇಳಿದರು.

ಇಷ್ಟು ವರ್ಷಗಳಾದ ಮೇಲೂ ನನೊಳಗೆ ಏನಿದೆ ಅನ್ನೋದು ನನಗೆ ಗೊತ್ತಾಗುತ್ತಿಲ್ಲ. ನನ್ನ ವೃತ್ತಿ ಜೀವನವಾಗಿದ್ದ ಕ್ರಿಕೆಟನ್ನ ಕಳೆದ ಆರು ವರ್ಷಗಳಿಂದ ಆಡಿಯೇ ಇಲ್ಲ ಎಂದು ಬೇಸರದಿಂದ ಹೇಳಿದ್ದಾರೆ.

ಅತಿ ದೊಡ್ಡ ತೀರ್ಪನ್ನ ನೀಡಿರುವ ನ್ಯಾಯಾಲಯದ ತೀರ್ಪನ್ನ ಬಸಿಸಿಐ ಗೌರವಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಈಗಾಲಾದರೂ ನಾನು ಕ್ರಿಕೆಟ್ ಮೈದಾನಕ್ಕೆ ಮತ್ತೆ ಹೋಗುವಂತಾಯಿತು. ಎಲ್ಲಿಯವರೆಗೆ ಕ್ರಿಕೆಟ್ ಆಡಲು ಸಾಧುವಾವುದೋ ಅಲ್ಲಿಯವರೆಗೂ ಆಡುತ್ತೇವೆ ಎಂದು ಶ್ರೀಶಾಂತ್ ತಿಳಿಸಿದ್ದಾರೆ. 2007 ಮತ್ತು 2011ರ ವಿಶ್ವಕಪ್‍ನಲ್ಲಿ ಶ್ರೀಶಾಂತ್ ಆಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ