ಬೆಂಗಳೂರು, ಮಾ.15- ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಗಮನ ಸೆಳೆದ ಇಬ್ಬರು ಸರಗಳ್ಳರು ಸಮಯ ಸಾಧಿಸಿ 40 ಗ್ರಾಂ ಸರ ಕಸಿದು ಪರಾರಿಯಾಗಿರುವ ಘಟನೆ ಬಾಗಲೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಾಗಲಹಟ್ಟಿ ನಿವಾಸಿ ಲಕ್ಷ್ಮೀ ಎಂಬುವವರು ನಿನ್ನೆ ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ಶಾಲೆಯೊಂದರ ಮುಂಭಾಗ ವಾಯುವಿಹಾರಕ್ಕೆ ತೆರಳುತ್ತಿದ್ದರು.
ಈ ಸಂದರ್ಭದಲ್ಲಿ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ಸರಗಳ್ಳರು ಲಕ್ಷ್ಮಿ ಅವರನ್ನು ವಿಳಾಸ ಕೇಳುವ ನೆಪದಲ್ಲಿ ತಡೆದು ನಿಲ್ಲಿಸಿ ಯಲಹಂಕಕ್ಕೆ ಹೇಗೆ ಹೋಗಬೇಕೆಂದು ಕೇಳಿ ನಂತರ ಸ್ವಲ್ಪ ಮುಂದೆ ಚಲಿಸಿದಂತೆ ನಾಟಕವಾಡಿದ್ದಾರೆ.
ನಂತರ ಬೈಕ್ ಅನ್ನು ತಿರುಗಿಸಿಕೊಂಡು ಬಂದು ಲಕ್ಷ್ಮಿ ಅವರು ಧರಿಸಿದ್ದ 40 ಗ್ರಾಂ ಸರವನ್ನು ಎಳೆದುಕೊಂಡು ಸರಗಳ್ಳರು ಪರಾರಿಯಾಗಿದ್ದಾರೆ.
ತಕ್ಷಣ ಲಕ್ಷ್ಮಿ ಅವರು ಸಹಾಯಕ್ಕಾಗಿ ಕೂಗಿಕೊಂಡರಾದರೂ ಪ್ರಯೋಜನವಾಗಿಲ್ಲ.
ಬಾಗಲೂರು ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.