ಚೆನ್ನೈ: ಲೋಕಸಭೆ ಚುನಾವಣಾ ಪ್ರಚಾರ ಸಭೆಗಳಿಗೆ ಜನರನ್ನು ಕ್ರೋಢೀಕರಿಸಲು ಅವರನ್ನು ಬಾಡಿಗೆ ರೂಪದ ಟ್ರಕ್, ಬಸ್ ಹಾಗೂ ವ್ಯಾನ್‌ಗಳಲ್ಲಿ ಕರೆತರುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಿದೆ.
ಮದುರೈ ಮೂಲದ ಕಾರ‍್ಯಕರ್ತ ಕೆ.ವಿ.ರಮೇಶ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕೋರ್ಟ್, ಈ ಸೂಚನೆ ನೀಡಿದೆ. ಈ ಸಂಬಂಧ ಮಾರ್ಚ್ 27ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಹೇಳಿ ಪಕ್ಷಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಬ್ಯಾನರ್, ಕ್ಯಾನ್‌ವಾಸ್ ಬೋರ್ಡ್‌ಗಳನ್ನು ಹಾಕದಂತೆ ರಾಜಕೀಯ ಪಕ್ಷಗಳಿಗೆ ತಾಕೀತು ಮಾಡಿ ಮಧ್ಯಂತರ ಆದೇಶ ಹೊರಡಿಸಿದೆ.
cant use vehicles to bring audience to the political rally says court