ಆಂಧ್ರಪ್ರದೇಶ, ತೆಲಂಗಾಣದಲ್ಲಿ ಬಿಎಸ್ ಪಿ-ಜನಸೇನಾ ಪಕ್ಷ ಮೈತ್ರಿ

ನವದೆಹಲಿ: ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಹುಜನ ಸಮಾಜವಾದಿ ಪಕ್ಷ ಆಂಧ್ರಪ್ರದೇಶದಲ್ಲಿ ನಟ, ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ತಿಳಿಸಿರುವ ಉಬಯ ನಾಯಕರು, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಬಿಎಸ್​​​ಪಿ ಹಾಗೂ ಜನಸೇನಾ ಪಕ್ಷ ಒಂದಾಗಿ ಹೋರಾಟ ನಡೆಸಲಿವೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಮಾಯಾವತಿ, ಆಂಧ್ರಪ್ರದೇಶದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ನಾವು ಒಂದಾಗಿ ಹೋರಾಟ ನಡೆಸಲಿದ್ದೇವೆ.

ಆಂಧ್ರಪ್ರದೇಶ ಜನ ಈ ಬಾರಿ ಸರ್ಕಾರ ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ. ಬಿಎಸ್​​ಪಿ, ನಟ ರಾಜಕಾರಣಿ ಪವನ್​ ಕಲ್ಯಾಣ ಮತ್ತು ಕೆಲ ಕಮ್ಯೂನಿಸ್ಟ್​ ಪಕ್ಷಗಳ ಜತೆ ಸೇರಿ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಹೋರಾಟ ನಡೆಸಲಿದ್ದೇವೆ ಎಂದು ಘೋಷಿಸಿದರು.

ನಾನು ಆಂಧ್ರದಲ್ಲಿ ಪವನ್​ ಕಲ್ಯಾಣ ಸಿಎಂ ಆಗಿ ನೋಡಬೇಕು ಎಂದು ಬಯಸಿದ್ದೇನೆ. ಎರಡೂ ಚುನಾವಣೆಯಲ್ಲಿ ಸೀಟು​ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದರು.

ಇದೇ ವೇಳೆ ಪವನ್ ಕಲ್ಯಾಣ್, ನಾವು ಮಾಯಾವತಿ ಅವರ ಬಿಎಸ್‍ಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ. ಅವರು ದೇಶದ ಪ್ರಧಾನಿ ಆಗುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

2014 ರಲ್ಲಿ ಪಕ್ಷ ಹೆಸರು ಅಧಿಕೃತ ಘೋಷಣೆ ಮಾಡಿದ ಬಳಿಕ ಮೊದಲ ಬಾರಿಗೆ ಜನಸೇನಾ ಪಕ್ಷ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದೆ. ಆಂಧ್ರಪ್ರದೇಶದ 32 ವಿಧಾನಸಭಾ ಹಾಗೂ 6 ಲೋಕಸಭಾ ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

BSP, Jana Sena to jointly contest Lok Sabha election in Andhra Pradesh and Telangana

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ