![aresht](http://kannada.vartamitra.com/wp-content/uploads/2018/03/aresht-573x381.jpg)
ಮೈಸೂರು, ಮಾ.15-ನಿಲ್ದಾಣಗಳಲ್ಲಿ ಮಲಗುತ್ತಿದ್ದ ಪ್ರಯಾಣಿಕರ ಬಳಿ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಲಷ್ಕರ್ ಠಾಣೆ ಪೆÇಲೀಸರು ಬಂಧಿಸಿ 10 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಎಚ್.ಡಿ.ಕೋಟೆ ತಾಲೂಕಿನ ಲಂಕೆ ಗ್ರಾಮದ ಮಂಜು(25) ಬಂಧಿತ ಆರೋಪಿ.
ಈತ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಮಲಗುತ್ತಿದ್ದ ಪ್ರಯಾಣಿಕರ ಬಳಿ ಮೊಬೈಲ್, ನಗದು ಸೇರಿದಂತೆ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದನು ಎಂದು ಪೆÇಲೀಸರು ತಿಳಿಸಿದ್ದಾರೆ.
ಮಾ.8 ರಂದು ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಬಸ್ ಹತ್ತುತ್ತಿದ್ದಾಗ ಮೊಬೈಲ್ನ್ನು ಈತ ಕದ್ದು ಪರಾರಿಯಾಗಿದ್ದನು.
ಈ ಸಂಬಂಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೆÇಲೀಸರು ಈತನನ್ನು ಕೆ.ಟಿ.ಸ್ಟ್ರೀಟ್ನಲ್ಲಿ ಬಂಧಿಸಿದ್ದಾರೆ. ಬಂಧಿತನಿಂದ 70 ಸಾವಿರ ರೂ. ಮೌಲ್ಯದ 10 ಮೊಬೈಲ್ ವಶಪಡಿಸಿಕೊಂಡಿದ್ದಾರೆ.