ಡ್ರೆಸಿಂಗ್ ರೂಮ್ನಲ್ಲಿ ನಮ್ಮ ಯಾವ ಹುಡುಗರು ನರ್ವಸ್ ಆಗಿಲ್ಲ, ಅಥವಾ ಹೆದರಿಕೊಂಡಿಲ್ಲ. ಮುಂಬರುವ ವಿಶ್ವಕಪ್ನಲ್ಲಿ ಯಾರನೆಲ್ಲ ಆಡಿಸಬೇಕೆಂಬುದು ನಮಗೆ ಗೊತ್ತಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ನಿನ್ನೆ ಆಸ್ಟ್ರೇಲಿಯಾ ವಿರುದ್ಧ ಐದನೇ ಏಕದಿನ ಪಂದ್ಯವನ್ನ ಸೋಲುವ ಮೂಲಕ ತವರಿನಲ್ಲಿ ಸರಣಿ ಕೈಚೆಲ್ಲಿಕೊಂಡ ಕೊಹ್ಲಿ ಪಡೆ ಭಾರೀ ಮುಖಭಂಗ ಅನುಭವಿಸಿತು.
ವಿರಾಟ್ ಕೊಹ್ಲಿ ನಾಯಕನಾದ ಮೇಲೆ ಟೀಂ ಇಂಡಿಯಾಗೆ ಈದು ಮೂರನೇ ಏಕದಿನ ಸರಣಿ ಸೋಲಾಗಿದೆ. ಮತು ಮೂರು ವರ್ಷದ ನಂತರ ತವರಿನಲ್ಲಿ ಇದು ಮೊದಲ ಸರಣಿ ಸೋಲಾಗಿದೆ.
ನಾವು ಕಾಂಭಿನೇಷನ್ ಪ್ರಕಾರ ಆಡುತ್ತೇವೆ. ಮುಂಬರುವ ವಿಶ್ವಕಪ್ನಲ್ಲಿ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರನೆಲ್ಲ ಆಡಿಸಬೇಕೆಂಬುದು ನನಗೆ ಗೊತ್ತು. ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ಗೆ ಜೀವ ತುಂಬುತ್ತಾರೆ. ನಾವು ಯಾವ ದಾರಿಯಲ್ಲಿ ಸಾಗುತ್ತಿದ್ದೇವೆ ಅನ್ನೋದು ನಮಗೆ ಗೊತ್ತಿದೆ.
ಯಾವ ತಂಡಗಳು ಈ ಬಾರಿಯ ವಿಶ್ವಕಪ್ನಲ್ಲಿ ಫೇವರಿಟ್ ಅಲ್ಲ. ವೆಸ್ಟ್ ಇಂಡೀಸ್, ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಗಳು ಬಲಿಷ್ಠ ತಂಡಗಳಾಗಿ ಕಾಣುತ್ತವೆ.
ಆಸ್ಟ್ರೇಲಿಯಾ ತಂಡ ಸಮತೋಲನದಿಂದ ಕೂಡಿದೆ. ಪಾಕಿಸ್ತಾನ ತಂಡ ಯಾವ ತಂಡವನ್ನ ಬೇಕಾದ್ರು ಸೋಲಿಸುವ ತಾಕತ್ತು ಹೊಂದಿದೆ. ವಿಶ್ವಕಪ್ಗೆ ನಾವು ಯಾವ ಮನಸ್ಥಿತಿಯಲ್ಲಿ ನಾವು ಹೋಗುತ್ತೇವೆ ಅನ್ನೋದಷ್ಟೆ ಇಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ ಎಂದು ಕೊಹ್ಲಿ ವಿವರಿಸಿದ್ದಾರೆ.
ಪಂದ್ಯದ ಸೋಲಿನ ಕುರಿತು, ಗುರಿಯನ್ನ ಮುಟ್ಟಬಹುದೆಂದು ಅಂದುಕೊಂಡಿದ್ದೆವು. ಕೊನೆಯಲ್ಲಿ ಸ್ವಲ್ಪ ದೂರ ಹೊಯಿತು. 15ರಿಂದ 20 ರನ್ ಜಾಸ್ತಿ ಹೆಚ್ಚುವರಿ ರನ್ ಬೇಕಾಗಿತ್ತು.ಒಂದು ಮತ್ತು ಎರಡು ಓವರ್ಗಳು ಎಲ್ಲವನ್ನು ಬದಲಾವಣೆ ಮಾಡಿಬಿಡುತ್ತೆ. ಇಡೀ ಸರಣಿ ಬಗ್ಗೆ ಹೇಳೊದಾದ್ರೆ ಆಸ್ಟ್ರೇಲಿಯಾ ಗೆಲುವಿನ ಆಸೆಯಿಂದ ಆಡಿ ಸರಣಿಗೆಲ್ಲು ಅರ್ಹವಾಗಿತ್ತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.