ಡೆನೆವರ್: ಅಮೆರಿಕದಲ್ಲಿ ಬಾಂಬ್ ಚಂಡಮಾರುತ ಅಪ್ಪಳಿಸಿದ್ದು, ಭಾರೀ ಬಿರುಗಾಳಿಯೊಂದಿಗೆ ಹಿಮಪಾತವುಂಟಾಗಿದೆ. ಪರಿಣಾಮ ಜನಜೀವನ, ವೈಮಾನಿಕ ಪ್ರಯಾಣ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸುಮಾರು 1,339 ವಿಮಾನಗಳ ಸಂಚಾರ ರದ್ದುಗೊಂಡಿದೆ.
ಚಂಡಮಾರುತ ಪರಿಣಾಮ ಪರ್ವತಶ್ರೇಣಿಗಳು, ಗುಡ್ಡಗಾಡು ಪ್ರದೇಶದಲ್ಲಿ ಭಾರಿ ಹಿಮಪಾತವಾದರೆ, ಬಯಲು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ 1,339 ವಿಮಾನಗಳು ಹಾಗೂ ವಾಹನಗಳ ಸಂಚಾರದಲ್ಲಿ ಭಾರಿ ವ್ಯತ್ಯ ಉಂಟಾಗಿದೆ.
ಕೊಲಾರಾಡೋ, ವ್ಯೋಮಿಂಗ್, ನೆಬ್ರಸ್ಕಾ ಮತ್ತು ಡಕೋಟಾಗಳಲ್ಲಿ ಬಿರುಗಾಳಿಯಿಂದಾಗಿ ತೊಂದರೆಯುಮ್ತಾಗಿದ್ದು, ಜನರು ಮನೆಯಿಂದ ಹೊರಬರದಂತೆ ಹಾಗೂ ವಾಹನಗಳನ್ನು ಬಳಸದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬಾಂಬ್ ಬಿರುಗಾಳಿ ಎಂಬುದು ಒಂದು ಬಿರುಗಾಳಿಯ ಹೆಸರು. 24 ಗಂಟೆಗಳ ಅವಧಿಯಲ್ಲಿ ಬ್ಯಾರೋಮೆಟ್ರಿಕ್ ಒತ್ತಡ 24 ಬಾರ್ ಇಳಿಕೆಯಾದಾಗ ಏಳುವ ಬಿರುಗಾಳಿ. ಈ ಬಿರುಗಾಳಿ ಎದ್ದಾಗ ತುಂಬಾ ಬಿರುಸಾಗಿ ಗಾಳಿ ಬೀಸುತ್ತದೆ. ಜತೆಗೆ ಭಾರಿ ಹಿಮವರ್ಷ ಅಥವಾ ಮಳೆಯಾಗುತ್ತದೆ.
Bomb Cyclone Brings Snow, High Winds To US; 1,339 Flights Cancelled