ನವದೆಹಲಿ: ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪರಮ ವಿಶಿಷ್ಟ ಸೇವಾ ಮೆಡಲ್ ಪ್ರದಾನ ಮಾಡಿ ಗೌರವಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ, ರಾಷ್ಟ್ರಪತಿಗಳು, ಬಿಪಿನ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ವೇಳೆ, ಹುತಾತ್ಮ ಸಿಪಾಯಿ ಬ್ರಹ್ಮ ಪಾಲ್ ಸಿಂಗ್ ಹಾಗೂ ಸಿಆರ್ಪಿಎಫ್ ಜವಾನ್ಗಳಾದ ರಾಜೇಂದ್ರ ನಯನ್ ಮತ್ತು ರವೀಂದ್ರ ಬಬ್ಬಾನ್ ಧನ್ವಾಡೆ ಅವರಿಗೆ ಮರಣೋತ್ತರ ಕೀರ್ತಿ ಚಕ್ರ ಪ್ರದಾನ ಮಾಡಲಾಯಿತು.
ಕುಪ್ವಾರಾದ ಗಡಿ ನಿಯಂತ್ರಣ ರೇಖೆ ಬಳಿ ಮೂವರು ಉಗ್ರರನ್ನು ಹೊಡೆದುರುಳಿಸಿದ 20ನೇ ಜಾಟ್ ರೆಜಿಮೆಂಟ್ನ ಮೇಜರ್ ತುಷಾರ್ ಗೌಬ ಅವರಿಗೂ ಕೀರ್ತಿ ಚಕ್ರ ನೀಡಿ ಗೌರವಿಸಲಾಯಿತು. 12 ಸೇನಾಧಿಕಾರಿಗಳು ಹಾಗೂ ಸಿಆರ್ಪಿಎಫ್ ಜವಾನ್ಗಳಿಗೆ ಶೌರ್ಯ ಚಕ್ರ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Army Chief Bipin Rawat to receive Param Vishisht Seva Medal