ಟೀಂ ಇಂಡಿಯಾ ಇಂದು ಆ್ಯರಾನ್ ಫಿಂಚ್ ಪಡೆ ವಿರುದ್ಧ ಇಂದು ಫಿರೋಜ್ ಶಾ ಪಡೆ ವಿರುದ್ಧ ಇಂದು ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಇಂದಂದು ಕಾಣದ ಅಗ್ನಿ ಪರೀಕ್ಷೆಯನ್ನ ಎದುರಿಸಲಿದೆ.
ಸರಣಿ ಆರಂಭದ ಎರಡು ಪಂದ್ಯಗಳನ್ನ ಗೆದ್ದು ಬೀಗಿದ್ದ ಕೊಹ್ಲಿ ಪಡೆ ಮೂರನೇ ಮತ್ತು ನಾಲ್ಕನೆ ಪಂದ್ಯದಲ್ಲಿ ಮುಗ್ಗರಿಸಿ ಬಿತ್ತು. ರಾಂಚಿ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ರೆ ಮೊಹಾಲಿ ಪಂದ್ಯದಲ್ಲಿ ಬೌಲರ್ಸ್ಗಳ ವೈಫಲ್ಯದಿಂದಾಗಿ ಪಂದ್ಯವನ್ನ ಕೈಚೆಲ್ಲಿಕೊಳ್ಳಬೇಕಾಯಿತು.
ಇದೀಗ 2-2 ಅಂಕಗಳಿಂದ ಉಭಯ ತಂಡಗಳು ಸಮಬಲ ಮಾಡಿಕೊಂಡಿದ್ದು ಇಂದು ನಡೆಯುವ ಕೊನೆಯ ಪಂದ್ಯದಲ್ಲೂ ಗೆಲುವಿನ ಕೇಕೆ ಹಾಕಲು ಹೋರಾಟ ಮಾಡಲು ಸಜ್ಜಾಗಿವೆ.
ಅಬ್ಬರಿಸಬೇಕು ಓಪನರ್ಸ್ ಸಿಡಿದೇಳಬೇಕು ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ಸ್
ಕಾಂಗರೂಗಳ ವಿರುದ್ಧ ಇಂದು ನಡೆಯುವ ಫೈನಲ್ ಫೈಟ್ನಲ್ಲಿ ಟೀಂ ಇಂಡಿಯಾ ಗೆದ್ದು ಮಾನ ಉಳಿಸಿಕೊಳ್ಳಬೇಕಿದ್ದಲ್ಲಿ ತಂಡದ ಬ್ಯಾಟ್ಸ್ಮನ್ಗಳು ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ಸಿಡಲಬ್ಬರದ ಬ್ಯಾಟಿಂಗ್ ಮಾಡಿ ರನ್ಗಳ ಹೊಳೆಯನ್ನೆ ಹರಿಸಬೇಕಿದೆ. ಮೊನ್ನೆ ಮೊಹಾಲಿಯಲ್ಲಿ ಆಡಿಸಿದ ಅದರಲ್ಲೂ ಫಾರ್ಮ್ಗೆ ಮರಳೀರುವ ಓಪನರ್ಸ್ಗಳಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಡಿಸೇಂಟ್ ಓಪನಿಂಗ್ ಕೊಡಬೇಕಿದೆ. ನಂತರ ಬರುವ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಾದ ಕನ್ನಡಿಗ ಕೆ.ಎಲ್. ರಾಹುಲ್, ಕ್ಯಾಪ್ಟನ್ ಕೊಹ್ಲಿ, ಜವಾಬ್ದಾರಿಯತ ಬ್ಯಾಟಿಂಗ್ ಮಾಡಬೇಕಿದೆ.
ಇನ್ನು ಮಿಡ್ಲ್ ಆರ್ಡರ್ನಲ್ಲಿ ಬರುವ ರಿಷಭ್ ಪಂತ್ , ಕೇದಾರ್ ಜಾಧವ್ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತು ಗೇಮ್ ಫಿನಿಶರ್ಗಳಾಗಿ ಹೊರ ಹೊಮ್ಮಬೇಕಿದೆ.
ಇನ್ನು ಟoತಿeಡಿ ಆರ್ಡರ್ನಲ್ಲಿ ಬರುವ ಆಲ್ರೌಂಡರ್ ವಿಜಯ್ ಶಂಕರ್ ಸಂದರ್ಭಕ್ಕೆ ತಕ್ಕಂತೆ ಆಡಿ ಚಾಣಾಕ್ಷತನ ಮೆರೆಯಬೇಕಿದೆ.
ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ಹಿಟ್ಮ್ಯಾನ್ ರೋಹಿತ್
ಟೀಂ ಇಂಡಿಯಾ ಹಿಟ್ಮ್ಯಾನ್ ರೋಹಿತ್ ಶರ್ಮಾ ಮತ್ತೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆ. ರೋಹಿತ್ ಇಂದು ನಡೆಯುವ ಪಂದ್ಯದಲ್ಲಿ 46 ರನ್ಗಳಿಸಿದ್ರೆ ಏಕದಿನ ಕ್ರಿಕೆಟ್ನಲ್ಲಿ 8 ಸಾವಿರ ರನ್ ಪೂರೈಸಿದ ಸಾಧನೆ ಮಾಡಿ ಎಲೈಟ್ ಕ್ಲಬ್ ಸೇರಲಿದ್ದಾರೆ. ಫಾರ್ಮ್ಗೆ ಮರಳಿರುವ ರೋಹಿತ್ ಮೊನ್ನೆ ಮೊಹಾಲಿ ಪಂದ್ಯದಲ್ಲಿ 95 ರನ್ಗಳಿಸಿ ಶತಕ ವಂಚಿತರಾಗಿದ್ರು.
ತವರಲ್ಲಿ ಕಮಾಲ್ ಮಾಡ್ತರಾ ತ್ರಿಮೂರ್ತಿಗಳು..?
5 ಪಂದ್ಯಗಳ ಏಕದಿನ ಸರಣಿಯಲ್ಲಿ ಸಮಬಲ ಸಾಧಿಸಿರುವ ಉಭಯ ತಂಡಗಳು ಅಂತಿಮ ಪಂದ್ಯಕ್ಕೆ ಹಣೆಯಾಗುತ್ತಿವೆ. ಅಲ್ಲದೆ 5ನೇ ಏಕದಿನ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಉಭಯ ತಂಡಗಳು ತುದಿಗಾಲಲ್ಲಿ ನಿಂತಿವೆ.. ಈ ನಡುವೆ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಯಾರ ಬ್ಯಾಂಟ್ನಿಂದ ರನ್ ಹೊಳೆ ಹರಿಯುತ್ತೆ ಎಂಬ ಕುತೂಹಲ ಹೆಚ್ಚಾಗಿದೆ. ಟೀಂ ಇಂಡಿಯಾದಲ್ಲಿ ಮೂವರು ಲೋಕಲ್ ಬ್ಯಾಯ್ಸ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ತವರಲ್ಲಿ ರನ್ಗಳ ಕೋಟೆ ಕಟ್ಟಬೇಕು ರನ್ ಮಷಿನ್
ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. 2ನೇ ಹಾಗೂ 3ನೇ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಆಸಿಸ್ ಬೌಲರ್ಗಳನ್ನು ಬೆಂಡೆತ್ತಿದ್ದ ಕೊಹ್ಲಿ ಇಂದು ತಮ್ಮ ತವರಲ್ಲಿ ಆಸಿಸ್ ಬೌಲರ್ಸ್ಗಳನ್ನ ಚೆಂಡಾಡೋದ್ರಲ್ಲಿ ಅನುಮಾನವೇ ಇಲ್ಲ ಈಗಾಗಲೇ ಸರಣಿಯಲ್ಲಿ ಅತ್ಯಧಿಕ 290 ರನ್ ರನ್ ಮಷಿನ್ ವಿರಾಟ್ ಕೊಹ್ಲಿ ಬಾರಿಸಿದ್ದಾರೆ. ಇನ್ನೂ ಫಿರೋಜ್ ಷಾ ಕೋಟ್ಲಾ ಮೈದಾನ ವಿರಾಟ್ ಕೊಹ್ಲಿಗೆ ತವರಿನ ಅಂಗಳವಾಗಿದ್ದು 42ನೇ ಶತಕ ದಾಖಲಿಸುವ ನಿರೀಕ್ಷೆ ಹೆಚ್ಚಾಗಿದೆ.
ಗ್ರೇಟ್ ಕಮ್ಬ್ಯಾಕ್ ಮಾಡಿದ್ದಾರೆ ಡೆಲ್ಲಿ ಡ್ಯಾಶರ್ ಧವನ್
ಆರಂಭದ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಡೆಲ್ಲಿ ಡ್ಯಾಶರ್ ಶಿಖರ್ ಧವನ್ ಹಿಂದಿನ ಪಂದ್ಯದಲ್ಲಿ 143 ರನ್ ಸಿಡಿಸುವ ಮೂಲಕ ಮತ್ತೆ ಫಾರ್ಮ್ಗೆ ಮರಳಿದ್ದಾರೆ. ಗಬ್ಬರ್ ಸಿಂಗ್ ಫಾರ್ಮ್ಗೆ ಮರಳಿದ್ದು ಟೀಮ್ ಇಂಡಿಯಾದ ಆತಂಕವನ್ನು ದೂರ ಮಾಡಿದೆ. ತವರಿನ ಅಂಗಳಲ್ಲಿ ಮತ್ತೆ ತಮ್ಮ ಬ್ಯಾಟಿಂಗ್ ತೋರಿಸಲು ಗಬ್ಬರ್ ಸಿಂಗ್ ಕಾತರರಾಗಿದ್ದಾರೆ…
ಒಟ್ಟಾರೆ ಟೀಂ ಇಂಡಿಯಾದ ಗೆಲುವು ತಂಡದ ಬ್ಯಾಟ್ಸ್ಮನ್ಸ್ಗಳ ಮೇಲೆ ನಿಂತಿರೋದ್ರಿಂದ ಬ್ಯಾಟ್ಸ್ಮನ್ಸ್ಗಳು ಬದ್ಧತೆಯನ್ನ ಪ್ರದರ್ಶಿಸಬೇಕಿದೆ