ಹೈದರಾಬಾದ್‍ನ 8 ಕಂಪನಿಗಳಿಂದ ಬಾರಿ ಪ್ರಮಾಣದಲ್ಲಿ ತೆರಿಗೆ ವಂಚನೆ

tax fraud red square grunge textured isolated stamp

ಹೈದರಾಬಾದ್, ಮಾ.13-ಹೈದರಾಬಾದ್‍ನ ಎಂಟು ಕಂಪನಿಗಳು 224 ಕೋಟಿ ರೂ.ಗಳ ತೆರಿಗೆ ವಂಚನೆ ಮಾಡಿರುವುದನ್ನು ಕೇಂದ್ರೀಯ ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‍ಟಿ) ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಸಂಸ್ಥೆಗಳು 1,249 ಕೋಟಿ ರೂ.ಗಳ ಮೌಲ್ಯದ ನಕಲಿ ಇನ್‍ವಾಯ್ಸ್‍ಗಳನ್ನು ಸೃಷ್ಟಿಸಿದ್ದವು.

ಈ ಸಂಬಂದ ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಲಾಗಿದ್ದು, ಆತನಿಂದ 19.75 ಕೋಟಿ ರೂ.ಗಳ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ನಿನ್ನೆ ರಾತ್ರಿ ಎಂಟು ಕಂಪನಿಗಳ ಮತ್ತು ಮುಖ್ಯಸ್ಥರ ಮನೆಗಳ ಮೇಲೆ ಏಕಕಾಲಕ್ಕೆ ಜಿಎಸ್‍ಟಿ ಅಧಿಕಾರಿಗಳು ದಾಳಿ ನಡೆಸಿ ತೆರಿಗೆ ವಂಚನೆಗೆ ಸಂಬಂದಪಟ್ಟಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಂಡರು.

ಬಾರಿ ಪ್ರಮಾಣದಲ್ಲಿ ತೆರಿಗೆ ವಂಚನೆ ಪ್ರಕರಣಗಳ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಜಿಎಸ್‍ಟಿ ಅಧಿಕಾರಿಗಳು ಹೈದರಾಬಾದ್ ವಿವಿಧೆಡೆ ಈ ದಾಳಿಗಳು ನಡೆದಿವೆ. ಬಂದಿತನ ವಿಚಾರಣೆಯಿಂದ ಮತ್ತಷ್ಟು ತೆರಿಗೆ ವಂಚನೆ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ