ಧೋನಿಯನ್ನ ಟೀಕಿಸುತ್ತಿರುವವರು ಅವರು ಯಾಕಾಗಿ ಟೀಕಿಸುತ್ತಿದ್ದಾರೆ ಅನ್ನೋದು ನನಗೆ ಅರ್ಥವಾಗದ ವಿಚಾರ ಎಂದು ಕ್ರಿಕೆಟ್ ದಂತ ಕತೆ ಶೇನ್ ವಾರ್ನ್ ತಿರುಗೇಟು ಕೊಟ್ಟಿದ್ದಾರೆ.
ಧೋನಿಯನ್ನ ಟೀಕಿಸುತ್ತಿರುವ ಕುರಿತು ಮಾತನಾಡಿರುವ ಶೇನ್ ವಾರ್ನ್ ಧೋನಿಯನ್ನ ಟೀಕಿಸುವವರು ಏನು ಮಾತನಾಡುತ್ತಿದ್ದಾರೆ ಅನ್ನೋದೇ ನನಗೆ ಗೊತ್ತಾಗುತ್ತಿಲ್ಲ. ಧೋನಿಯ ಅನುಭವ ಮತ್ತು ಪಂದ್ಯವನ್ನ ಅರ್ಥ ಮಾಡಿಕೊಳ್ಳುವ ರೀತಿಯಿಂದಾಗಿ ಟೀಂ ಇಂಡಿಯಾ ಡಿಆರ್‍ಎಸ್ ನಿಯಮವನ್ನ ಕೆಲವು ಸಂದರ್ಭಗಳಲ್ಲಿ ಸರಿಯಾಗಿ ಬಳಸಿಕೊಳ್ಳಲು ಸಹಕಾರಿಯಾಗಿದೆ.
ಸಂದರ್ಭಗಳು ಕಠಿಣವಾದಾಗ ಧೋನಿಯಂತ ಆಟಗಾರ ತಂಡಕ್ಕೆ ಬೇಕಾಗುತ್ತದೆ. ಧೋನಿ ಓರ್ವ ಶ್ರೇಷ್ಠ ಆಟಗಾರ ಟೀಂ ಇಂಡಿಯಾದಲ್ಲಿ ಇರಲೇಬೇಕಾದ ಆಟಗಾರ. ವಿಶ್ವಕಪ್‍ನಲ್ಲಿ ಧೋನಿಯ ಅನುಭವ ಮತ್ತು ನಾಯಕತ್ವದ ಕೌಶಲ್ಯ ತಂಡಕ್ಕೆ ನೆರವಾಗಲಿದೆ ಎಂದು ವಾರ್ನ್ ತಿಳಿಸಿದ್ದಾರೆ.