ನವದೆಹಲಿ,ಮಾ.13- ಲೋಕಸಭೆ ಚುನಾವಣೆ ಸಮೀಪಿಸುತ್ತಿರುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಹೆಚ್ಚಿನ ಮತದಾರರು ಪಾಲ್ಗೊಳ್ಳಲುವಂತೆ ಪ್ರೇರೇಪಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಸೇರಿದಂತೆ ಹಲವು ರಾಜಕೀಯ ನಾಯಕರಿಗೆ ಹಾಗೂ ಗಣ್ಯಾತಿಗಣ್ಯರಿಗೆ ಮನವಿ ಮಾಡಿದ್ದಾರೆ.
ಪ್ರಜಾಪ್ರಭುತ್ವ ಭಾರತದಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು. ಇದರಿಂದ ಯಾರೂ ವಂಚಿತರಾಗಬಾರದು. ಹೀಗಾಗಿ ರಾಜಕೀಯ ನಾಯಕರು ಮತದಾನಕ್ಕೆ ಪ್ರೇರಪಿಸಬೇಕೆಂದು ಪ್ರಧಾನಿ ತಮ್ಮ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತೃಣಮೂಲ ಪಕ್ಷದ ಮಮತಾ ಬ್ಯಾನರ್ಜಿ, ಬಿಎಸ್‍ಪಿಯ ಮಾಯವತಿ, ಎಸ್ಪಿಯ ಅಖಿಲೇಶ್ ಯಾದವ್, ಡಿಎಂಕೆ ಪಕ್ಷದ ಎಂ.ಕೆ.ಸ್ಟಾಲೀನ್, ಆರ್‍ಜೆಡಿಯ ತೇಜಸ್ವಿ ಯಾದವ್ ಹಾಗೂ ಎನ್‍ಸಿಪಿಯ ಶರದ್ ಪವಾರ್ ಅವರಿಗೆ ಟ್ವೀಟ್‍ನಲ್ಲಿ ಹೆಸರಿಸಿದ್ದಾರೆ.
ಅಲ್ಲದೆ ಉದ್ಯಮಿಗಳು, ನಟರು, ಪತ್ರಕರ್ತರು, ಆಧ್ಯಾತ್ಮಿಕ ನಾಯಕರು ಮತ್ತು ಕ್ರೀಡಾ ತಾರೆಯರನ್ನು ಕೂಡ ಪ್ರಧಾನಿ ಟ್ಯಾಗ್ ಮಾಡಿದ್ದಾರೆ, ಎಲ್ಲರೂ ಚುನಾವಣೆಯಲ್ಲಿ ಪಾಲ್ಗೊಳ್ಳಲು ಮತ್ತು ಯುವಕರಿಗೆ ಮತ ಚಲಾಯಿಸಲು ಪ್ರೇರೇಪಿಸಲು ಕೋರಿದ್ದಾರೆ.
ದಯವಿಟ್ಟು ಗ್ರೇಟರ್ ಮತದಾರ ಜಾಗೃತಿಯನ್ನು ಖಚಿತಪಡಿಸಿಕೊಳ್ಳಿ:
ಬಾಬಾ ರಾಮ್ದೇವ್ ಮತ್ತು ಶ್ರೀ ರವಿ ಶಂಕರ್ ಗುರೂಜೀಯಂತಹ ಹಲವು ಆಧ್ಯಾತ್ಮಿಕ ನಾಯಕರು ಹೆಚ್ಚು ಪ್ರಜಾಪ್ರಭುತ್ವದ ಭಾಗವಹಿಸುವಿಕೆಯ ಕಡೆಗೆ ಜನರನ್ನು ಪ್ರೇರೇಪಿಸುವಂತೆ ಸಹಕರಿಸಬೇಕೆಂದು ತಿಳಿಸಿದ್ದಾರೆ.