ಮೊಹ್ಮದ್ ಶಮಿ ಮನೆಗೆ ಭೇಟಿ ಕೊಟ್ಟ ಟೀಂ ಇಂಡಿಯಾ ಆಟಗಾರರು

ಟೀಂ ಇಂಡಿಯಾ ವೇಗಿ ಮೊಹ್ಮದ್ ಶಮಿ ಮನೆಗೆ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಎಲ್ಲ ಆಟಗಾರರು ಭೇಟಿಕೊಟ್ಟಿದ್ದಾರೆ.

ದೆಹಲಿಯ ಫೀರೋಜ್ ಶಾ ಕೋಟ್ಲಾ ಮೈದಾನದಲ್ಲಿ ಆಸಿಸ್ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನ ತಂಡದ ಆಟಗಾರರಿಗೆ ವೇಗಿ ಮೊಹ್ಮದ್ ಶಮಿ ಔತಣ ಕೂಟ ಏರ್ಪಡಿಸಿದ್ದರು. ತಂಡದ ಎಲ್ಲ ಆಟಗಾರರು ಈ ಔತಣ ಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ ಶಮಿ ಅವರ ಕುಟುಂಬ ಕೂಡ ಭೇಟಿ ಕೊಟ್ಟಿತ್ತು. ಇದನ್ನ ಸ್ವತಃ ಮೊಹ್ಮದ್ ಶಮಿ ತಮ್ಮ ಟ್ವೀಟರ್ ಖಾತೆಯಲ್ಲಿ ಫೋಟೋ ಹಾಕಿ ಬರೆದುಕೊಂಡಿದ್ದಾರೆ. ಇತ್ತಿಚೆಗೆ ಮೊಹಾಲಿ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಯುವ ವೇಗಿ ಸಿದ್ದಾರ್ಥ್ ಕೌಲ್ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ