
ಮೈಸೂರು,ಮಾ.13- ಮಣ್ಣು ಕುಸಿದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಮರಟ್ಟಿ ಕ್ಯಾತನಹಳ್ಳಿಯ ಕೂಲಿ ಕಾರ್ಮಿಕ ಭೋರೇಗೌಡ ಸಾವನ್ನಪ್ಪಿರುವ ವ್ಯಕ್ತಿ.
ವಿಜಯನಗರದ ಖಾಸಗಿ ಕಾಲೇಜೊಂದರ ಬಳಿ ಹಳೆ ಕಾರ್ಖಾನೆಯೊಂದರ ಕಾಂಪೌಂಡ್ ನಿರ್ಮಿಸಲು ಪಾಯ ತೆಗೆಯುತ್ತಿದ್ದ ವೇಳೆ ಬೋರೇಗೌಡರ ಮೇಲೆ ಮಣ್ಣು ಕುಸಿದುಬಿದ್ದಿದೆ.
ಕೂಡಲೇ ಅವರನ್ನು ಸ್ಥಳೀಯರು ಹೊರತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಭೋರೇಗೌಡ ಮೃತಪಟ್ಟಿದ್ದಾರೆ.
ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.