ಬೆಂಗಳೂರು, ಮಾ.12- ಮಹಳೆಯ ಘನತೆ ಕಾಯುವ ಸಮಸಮಾಜ ನಿರ್ಮಾಣಕ್ಕೆ ಬೇಕಿದೆ ಇಚ್ಛಾಶಕ್ತಿ ಮಹಿಳೆ, ಸಾಮಾಜಿಕ ಕಟ್ಟುಪಾಡುಗಳನ್ನು ಮೆಟ್ಟಿ ನಿಲ್ಲಬೇಕಾದರೆ ರಾಜಕೀಯ, ಆರ್ಥಿಕವಾಗಿ ಆಕೆಯ ಸಬಲಳಾಗಿಸುವ ಪ್ರಯತ್ನ ತೀವ್ರಗೊಳ್ಳಬೇಕು ಎಂದು ಕಾಸಿಯಾ ಅಧ್ಯಕ್ಷ ಬಸವರಾಜ್ ಎಸ್.ಜವಳಿ ಅಭಿಪ್ರಾಯಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾಸಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಅಗಾಧ ಸಾಧನೆ, ಸಾಮಥ್ರ್ಯದೊಂದಿಗೆ ಮುಂಚೂಣಿಯಲ್ಲಿರುವ ಸಂದರ್ಭದಲ್ಲೇ ಲಿಂಗ ತಾರತಮ್ಯ ನಿವಾರಣೆಗಾಗಿ ಸಮಾನತೆ ಸರಿದೂಗಿಸಬೇಕು. ಉತ್ತಮ ಸಮತೋಲನದೊಂದಿಗೆ ಉತ್ತಮ ಜಗತ್ತು ಸಾಧ್ಯ ಎಂಬುದು ಈ ವರ್ಷದ ವಿಶ್ವ ಮಹಿಳಾ ದಿನಾಚರಣೆಯ ಧ್ಯೇಯವಾಕ್ಯವಾಗಿದೆ ಎಂದರು.
ಮಹಿಳೆಯರು ನಾಲ್ಕು ಗೋಡೆಗಷ್ಟೇ ಸೀಮಿತ ಎಂಬ ಕಾಲದಿಂದ ದೇಶದ ಅತ್ಯುನ್ನತ ಸ್ಥಾನವನ್ನು ಪಡೆಯವು ಮಟ್ಟಿಗೆ ಮಹಿಳೆಯರು ಬಲದಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನವಾಗಿ ನಿಂತು ತನ್ನ ಸಾಮಥ್ರ್ಯದ ಅರಿವು ಮೂಡಿಸಿದಾಳೆ. ಹೆಣ್ಣು ಆಕಾಶದೆತ್ತರದಷ್ಟನ್ನು ಸಾಧಿಸಬಲ್ಲಳು ಎಂಬುದನ್ನು ಸಾಧಿಸಿ ತೋರಿಸಿದ ನೂರಾರು ಮಹಿಳೆಯರು ನಮ್ಮ ನಡುವೆ ಇದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾತನಾಡಿ, ಸಾಮಾಜಿಕ ಕಟ್ಟುಪಾಡುಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಬೇಕಾದರೆ ಆರ್ಥಿಕವಾಗಿ ಆಕೆಯನ್ನು ಸಬಲಳಾಗಿಸುವ ಪ್ರಯತ್ನಗಳು ಮತ್ತಷ್ಟು ಮಗದಷ್ಟು ತೀವ್ರಗೊಳ್ಳಬೇಕು. ಸಮಾನ ಆಸ್ತಿ ಹಕ್ಕು ಹಾಗೂ ದೌರ್ಜನ್ಯ ವಿರೋಧಿ ಕಾನೂನು ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದರು.
ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತ್ಕುಮಾರ್ ಮಾನವೀಯ ಮೌಲ್ಯಗಳನ್ನು ಕುರಿತು ಮಾತನಾಡುತ್ತಾ, ಮಹಿಳೆಯರಲ್ಲಿ ಅನ್ನ, ಅಕ್ಷರ, ಆರೋಗ್ಯ, ಪ್ರಕೃತಿ ಮತ್ತು ಸಂಸ್ಕøತಿ ತಾನಾಗಿಯೇ ಮೂಡಿ ಬರುತ್ತದೆ. ಇವುಗಳ ರಕ್ಷಣೆ ಮಹಿಳೆಯರದ್ದೇ ಆಗಿದೆ ಎಂದರು.
ಭವಿಷ್ಯದಲ್ಲಿ ಮಾನವೀಯತೆಯ ದೃಷ್ಟಿಯಿಂದ ಬೆಂಗಳೂರಿನಲ್ಲಿರುವ ಒಂದು ಕೋಟಿ ಜನರಿಗೆ 14,670 ಗಿಡಗಳು ಮಾತ್ರ ಇವೆ. ಆದರೆ, ಪ್ರತಿಯೊಬ್ಬ ಮನುಷ್ಯನ ಉಸಿರಾಟಕ್ಕೆ ಏಳು ಗಿಡಗಳ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಿಸಬೇಕೆಂದು ತಿಳಿಸಿದರು.
ಕಾಸಿಯಾ ಉಪಾಧ್ಯಕ್ಷ ಆರ್.ರಾಜು, ಪ್ರಧಾನ ಕಾರ್ಯದರ್ಶಿಗಳಾದ ರವಿಕಿರಣ ಕುಲಕರ್ಣಿ, ಸುರೇಶ್ ಎನ್.ಸಾಗರ್, ಜಂಟಿ ಕಾರ್ಯದರ್ಶಿಗಳಾದ ಎಸ್.ವಿಶ್ವೇಶ್ವರಯ್ಯ, ಶ್ರೀನಾಥ್ ಭಂಡಾರಿ ಉದ್ಯಾವರ್, ಖಜಾಂಚಿ ಲತಾ ಗಿರೀಶ್, ರೋಟರಿಯನ್ ಅನಿತಾ ಹರಿ, ಜೈರಾಜ್ ಶ್ರೀನಿವಾಸ್, ಗಾಯಿತ್ರಿ ಸುರೇಶ್, ಕು.ವೀಣಾ ಸುಜಯ್ಕುಮಾರ್, ಶುಭಮಂಗಳ ಸುನೀಲ್, ಡಾ.ಆಶಾ ಎಸ್.ವಿಜಯ್, ಗಾಯಿತ್ರಿ ಸುರೇಶ್ ಮತ್ತಿತರರು ಈ ಸಂದರ್ಭದಲ್ಲಿದ್ದರು.