ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್ಇ) ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 346 ಅಂಶಗಳ ಏರಿಕೆ ದಾಖಲಿಸಿದೆ.
ಸೋಮವಾರವಷ್ಟೇ ಆರು ತಿಂಗಳ ವಹಿವಾಟಿನಲ್ಲಿನ ಗರಿಷ್ಠ ಮಟ್ಟಕ್ಕೆ ತಲುಪಿ 383 ಅಂಶಗಳ ಜಿಗಿತ ಕಂಡಿತು. ವಿದೇಶಿ ಬಂಡವಾಳದ ಒಳಹರಿವಿನ ಹೆಚ್ಚಳ ಮತ್ತು ಸಕಾರಾತ್ಮಕ ಜಾಗತಿಕ ಸಂಗತಿಗಳಿಂದಾಗಿ ದೇಶದ ಷೇರುಪೇಟೆಯಲ್ಲಿ ಗರಿಷ್ಠ ಮಟ್ಟದಲ್ಲಿ ಖರೀದಿ ಚಟುವಟಿಕೆ ಆಶಾದಾಯಕವಾಗಿ ನಡೆಯಿತು ಎಂದು ಹೂಡಿಕೆ ತಜ್ಞರು ವಿಶ್ಲೇಷಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಮಧ್ಯೆ ಕಂಡು ಬಂದಿರುವ ಸೇನಾ ಸಂಘರ್ಷವು ಚುನಾವಣೆಯ ಮೇಲೆ ಪರಿಣಾಮ ಬೀರಲಿದ್ದು, ಎನ್ಡಿಎ ಸರ್ಕಾರಕ್ಕೆ ಅನುಕೂಲ ಮಾಡಿಕೊಡುವ ಸಾಧ್ಯತೆ ಇದೆ ಎನ್ನುವುದು ಪರಿಣತರ ವಾದ. ಎನ್ಡಿಎ ಸರ್ಕಾರ ಮರಳಿ ಅಧಿಕಾರಕ್ಕೆ ಬರುವುದೆಂಬ ವಿಶ್ವಾಸ ಪೇಟೆಯಲ್ಲಿ ಮೂಡಿರುವುದೇ ಮುಂಬೈ ಷೇರು ಪೇಟೆಯ ಏರಿಕೆಗೆ ಇಂಬು ನೀಡಿದೆ.
ಬ್ಯಾಂಕಿಂಗ್, ಮೆಟೆಲ್ ಮತ್ತು ಫಾರ್ಮಾ ವಲಯದ ಷೇರಗಳು ಖರೀದಿಯಲ್ಲಿ ಭರಾಟೆ ಕಂಡುಬಂದಿದೆ. ರಿಲಯನ್ಸ್ ಇಂಡಸ್ಟ್ರಿಸ್, ಎಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಷೇರುಗಳ ಖರಿದೀಯಲ್ಲಿ ಉತ್ಸಹ ಕಂಡುಬರುತ್ತಿದೆ.
10 ಗಂಟೆ ವೇಳೆಗೆ ಸೆನ್ಸೆಕ್ಸ್ 320.20 ಅಂಕಗಳ ಏರಿಕೆ ಕಂಡು 37,375ರ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 92.20 ಅಂಶಗಳ ಏರಿಕೆ ಮುಖೇನ 11,260 ಮಟ್ಟದಲ್ಲೂ ವ್ಯವಹಾರ ನಿರತವಾಗಿದೆ.